20 ರಾಷ್ಟ್ರಗಳ ನಡುವೆ ನಡೆಯಲಿರುವ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ಐರ್ಲೆಂಡ್, ಅಮೆರಿಕ ಮತ್ತು ಕೆನಡಾ ತಂಡಗಳಿರುವ ‘ಎ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ
2022 ಸಾಲಿನ ಚಾಂಪಿಯನ್ಸ್ ಇಂಗ್ಲೆಂಡ್ ತಂಡ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆಲುವನ್ನು ಎದುರು ನೋಡುತ್ತಿದ್ದು, ಆಸ್ಟ್ರೇಲಿಯಾ, ನಮಿಬಿಯಾ, ಸ್ಕಾಟ್ಲೆಂಡ್ ಮತ್ತು ಒಮಾನ್ ಇರುವ ‘ಬಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿದೆ. ‘ಸಿ’ ಪಿನಲ್ಲಿ ಆತಿಥೇಯ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಅಫಘಾನಿಸ್ತಾನಮ ಉಗಾಂಡ ಮತ್ತು ಪಪುವಾ ನ್ಯೂಗಿನಿ ತಂಡಗಳಿವೆ. ‘ಡಿ’ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್ ಮತ್ತು ನೇಪಾಳ ತಂಡಗಳು ಸ್ಥಾನ ಪಡೆದಿವೆ. ಜೂನ್ 1ರಂದು ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಜಂಟಿ ಆತಿಥ್ಯ ರಾಷ್ಟ್ರವಾದ ಅಮೆರಿಕ ಮತ್ತು ಕೆನಡಾ ತಂಡಗಳು ಕಾದಾಟ ನಡೆಸಲಿವೆ.
2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ಬರೋಬ್ಬರಿ 20 ತಂಡಗಳು ಪೈಪೋಟಿ ನಡೆಸಲಿವೆ. ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ತಲಾ 5 ತಂಡಗಳಿರುವ 4 ಗುಂಪುಗಳಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೂಪರ್ 8 ಹಂತಕ್ಕೆ ತೇರ್ಗಡೆಯಾಗಲಿವೆ. 8 ತಂಡಗಳನ್ನು ಎರಡು ಗುಂಪಾಗಿ ವಿಂಗಡಿಸಲಾಗುತ್ತದೆ. ಇದರಲ್ಲಿ ಅಗ್ರ 2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್ಗೆ ಕಾಲಿಡಲಿವೆ. ಜೂನ್ 29ರಂದು ಫೈನಲ್ ನಡೆಯಲಿದೆ.
2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪಂದ್ಯಗಳ ವೇಳಾಪಟ್ಟಿ
ಭಾರತ vs ಐರ್ಲೆಂಡ್ – ಜೂನ್ 5 ರಂದು ನ್ಯೂಯಾರ್ಕ್ನಲ್ಲಿ, ಸಂಜೆ 08:30
ಭಾರತ vs ಪಾಕಿಸ್ತಾನ – ಜೂನ್ 9 ರಂದು ನ್ಯೂಯಾರ್ಕ್ನಲ್ಲಿ, ಸಂಜೆ 08:30
ಭಾರತ vs ಅಮೆರಿಕ – ಜೂನ್ 12 ರಂದು ನ್ಯೂಯಾರ್ಕ್ನಲ್ಲಿ, ಸಂಜೆ 08:30
ಭಾರತ vs ಕೆನಡಾ – ಜೂನ್ 15 ರಂದು ಫ್ಲೋರಿಡಾದಲ್ಲಿ, ಸಂಜೆ 08:30