ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ನಗರದಲ್ಲಿ ಹೆಸ್ಕಾಂ ನಗರ ಘಟಕ ವತಿಯಿಂದ ಸಾರ್ವಜನಿಕರಿಗೆ ಹುಬ್ಬಳ್ಳಿ ವಿದ್ಯುತ ಸರಬರಾಜು ಕಂಪನಿ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯುತ್ ಸುರಕ್ಷತಾ ಮಾಸಾಚರಣೆ ಹಾಗೂ ಸುರಕ್ಷತಾ ಅಭಿಯಾನ ಕಾರ್ಯಕ್ರಮ ನಡೆಯಿತು. ಯಾವಾಗಲೂ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಐ ಎಸ್ ಐ ಅಧಿಕೃತ ಗುಣಮಟ್ಟದ ಸಾಮಗ್ರಿಗಳನ್ನ ಉಪಯೋಗಿಸಿ.
ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯನ್ನು ಮುಟ್ಟಬೇಡಿ ಹಾಗೂ ಈ ವಿಷಯವನ್ನು ಕೂಡಲೇ ನಿಗಮದ ಅಧಿಕಾರಿಗಳಿಗೆ 1912 ಕರೆ ಮಾಡಿ ತಿಳಿಸಿ. ವಿದ್ಯುತ್ ಕಂಬಗಳಿಗೆ ಪ್ರಾಣಿಗಳನ್ನು ಕಟ್ಟಬೇಡಿ ವಿದ್ಯುತ್ ಕಂಬದ ತಂತಿಗಳ ಮೇಲೆ ಬಟ್ಟೆಗಳನ್ನು ಒಣಗಿಸಲು ಹಾಕಬಾರದು.
ತಂತಿ ಬೇಲಿಗಳಿಗೆ ಅಕ್ರಮವಾಗಿ ವಿದ್ಯುತ್ ಹಾಯ್ಸಬಾರದು ಸಾರ್ವಜನಿಕರು ವಿದ್ಯುತ್ ಕಂಬಗಳನ್ನು ಹತ್ತಬಾರದು ಭೂಸಂಪರ್ಕ ವ್ಯವಸ್ಥೆ ಇಲ್ಲದೆ ವಿದ್ಯುತ್ ಉಪಕರಣಗಳನ್ನು ಬಳಸಬಾರದು. ವಿದ್ಯುತ್ ಮಾರ್ಗಗಳ ಕಡೆಗೆ ಬಾಲ್ಕನಿಗಳನ್ನು ಕಿಟಕಿಗಳನ್ನು ನಿರ್ಮಿಸಬಾರದು ಎಂದು ರಬಕವಿ ನಗರದ ಹೆಸ್ಕಾಂ ಅಧಿಕಾರಿ ಬ್ರಹ್ಮಾನಂದ ಮಾಸ್ತಿ ಹೇಳಿದರು.
ವಿದ್ಯುತ್ ಎಂದರೆ ಅಪಾಯಕಾರಿ ದಯವಿಟ್ಟು ಸಾರ್ವಜನಿಕರು ಎಚ್ಚರವಹಿಸಿ ಎಂದು ನಗರದ ತುಂಬೆಲ್ಲ ಕರಪತ್ರಗಳ ಹಂಚಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಸಿತಲ ಸಂಕಾರ.
ವಿನೋದ ಬಾವಲತ್ತಿ. ನಿತಿನ್ ರಾಯನ್ನವರ. ರಿಯಾಜ್ ನದಾಫ. ಕೀರಣ ಮುಂಡಗನೂರ. ಮಲ್ಲಿಕಾರ್ಜುನ ರೆಡ್ಡಿ. ವಿನಾಯಕ ಜಗ್ಗದಾಳ. ಸಾಬು ಬಂಡಿ ಸರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ