ಕೇಪ್ಟೌನ್: ಟೀಂ ಇಂಡಿಯಾ (Team India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊನೆಯ ಆಟವಾಡಿದ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್ಮನ್ ಡೀನ್ ಎಲ್ಗರ್ಗೆ (Dean Elgar) ಭಾರತದ ಆಟಗಾರರು ಅದ್ದೂರಿ ಬೀಳ್ಕೊಡುಗೆ ನೀಡಿದ್ದಾರೆ
ಟೀಂ ಇಂಡಿಯಾ ಆಟಗಾರರು ಜೆರ್ಸಿಯೊಂದರ ಮೇಲೆ ಎಲ್ಲಾ ಆಟಗಾರರು ಆಟೋಗ್ರಾಫ್ ಹಾಕಿ ಎಲ್ಗರ್ಗೆ ಗಿಫ್ಟ್ ನೀಡಿದ್ದಾರೆ. ಪಂದ್ಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಡೀನ್ ಎಲ್ಗರ್ ಜೊತೆ ಬಹಳ ಹೊತ್ತು ಸಂಭಾಷಣೆ ನಡೆಸಿದ್ದಾರೆ.
ಇದಕ್ಕೂ ಮುನ್ನ ಮೊದಲ ದಿನದಾಟದಲ್ಲಿ ದಕ್ಷಿಣ ಆಫ್ರಿಕಾದ ಎರಡನೇ ಇನಿಂಗ್ಸ್ನಲ್ಲಿ ಡೀನ್ ಎಲ್ಗರ್ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ವಾಪಾಸ್ಸಾಗುವ ವೇಳೆಯಲ್ಲೂ ಅವರಿಗೆ ಕೊಹ್ಲಿ ಅಪ್ಪುಗೆಯ ವಿದಾಯ ಹೇಳಿದ್ದರು.
ಸೆಂಚೂರಿಯನ್ನಲ್ಲಿ ಭಾರತ ಎದುರು ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಡೀನ್ ಎಲ್ಗರ್ ಆಕರ್ಷಕ 185 ರನ್ ಸಿಡಿಸಿದ್ದರು. ಎರಡು ಪಂದ್ಯಗಳಿಂದ ಎಲ್ಗರ್ 201 ರನ್ಗಳನ್ನು ಗಳಿಸಿದ್ದರು. ಬ್ಯಾಟಿಂಗ್ನಲ್ಲಿ ಅಮೋಘ ಪ್ರದರ್ಶನ ತೋರಿದ ಡೀನ್ ಎಲ್ಗರ್ ತಮ್ಮ ವಿದಾಯದ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಂಚಿಕೊಂಡರು