ಬೆಳಗಾವಿ:- ಅಕ್ಕ, ತಮ್ಮನ ಮೇಲೆ ದುಷ್ಕರ್ಮಿಗಳ ಗುಂಪೊಂದು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಮಾರಣಾಂತಿಕವಾಗಿ ಥಳಿಸಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಈ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಈಗಾಗಲೇ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ೯ ಜನರನ್ನು ಬಂಧಿಸಿದ್ದಾರೆ. ನಗರದ ಸಮೀಪದ ಯಮನಾಪುರದ ನಿವಾಸಿಗಳಾದ ಸಚೀನ ಲಮಾಣಿ ಹಾಗೂ ಮುಸ್ಕಾನ ಗಂಭೀರವಾಗಿ ಗಾಯಗೊಂಡವರು, ಇಲ್ಲಿನ ರಾಮನಗರದ ವಡ್ಡರಛಾವಣಿಯ ಮೊಹಮ್ಮದ ಹುಸೇನ್ ನೂರಹಮ್ಮದ ಇನಾಮಾದರ (೨೨), ಶಿವಾಜಿನಗರದ ಪಂಜಿಬಾಬಾ ನಿವಾಸಿ ಅತೀಫ್ಅಹ್ಮದ ಅಬ್ದುಲ್ ಮಜೀದ ಶೇಖ (೨೨), ಆಜಾದನಗರದ ಮಹ್ಮದಅಮನ್ ಗುಲಾಮಹುಸೇನ ಚಾಬುಕಸವಾರ್ (೨೭), ರಾಮನಗರದ ಸೈಫಅಲಿ ನಸೀಮಮುಲ್ಲನಿ ಇಸ್ಮಾಯಿಲ್ ಮಗದುಮ್ (೨೭), ವೀರಭದ್ರನಗರದ ಉಮರ್ ಸಾಧಿಕ ಬಡೇಗರ (೧೯) ಕ್ಯಾಂಪ ಪ್ರದೇಶದ ಮಾರ್ಕೇಟ್ ಸ್ಟ್ರೀಟ್ಮ ರಿಹಾನ್ ಮಹ್ಮದಗೌಸ್ ರೋಟಿವಾಲೆ (೧೯) ವೀರಭದ್ರನಗರದ ಅಜಾನ ಅಬೆದಿನ ಕಾಲಕುಂದ್ರಿ (೧೯) ಹಾಗೂ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ೯ ಜನರನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಶನಿವಾರ ಬೆಳಗಾವಿಯ ಕೋಟೆ ಕೆರೆಯ ದಡದಲ್ಲಿ ಕುಳಿತಿದ್ದ ಅಕ್ಕ, ತಮ್ಮನನ್ನು ಎಳೆದೊಯ್ದು ಶೆಡ್ನೊಳಗೆ ಕೂಡಿಹಾಕಿ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಇವರಿಬ್ಬರ ತಾಯಂದಿರು ಅಕ್ಕ, ತಂಗಿಯರು. ಯುವತಿಯ ತಂದೆ ಬೇರೆ ಸಮಾಜಕ್ಕೆ ಸೇರಿದವರಾಗಿದ್ದು, ಈಗಾಗಲೇ ಮೃತಪಟ್ಟಿದ್ದಾರೆ.
ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಇಬ್ಬರೂ ಬೆಳಗಾವಿಗೆ ಆಗಮಿಸಿದ್ದರು. ಸರ್ವರ್ ಸಮಸ್ಯೆ ಇದೆ, ಮಧ್ಯಾಹ್ನ ೩ಕ್ಕೆ ಬರುವಂತೆ ಸೇವಾ ಕೇಂದ್ರ ಸಿಬ್ಬಂದಿ ತಿಳಿಸಿದ್ದಾರೆ. ಆದ್ದರಿಂದ ಸ್ವಲ್ಪ ಹೊತ್ತು ಕೋಟೆ ಕೆರೆ ದಡದಲ್ಲಿ ಕುಳಿತುಕೊಳ್ಳೋಣ ಎಂದು ಇಬ್ಬರೂ ಮಧ್ಯಾಹ್ನ ೧ ಗಂಟೆಗೆ ತೆರಳಿದ್ದರು.
ಇವರಿಬ್ಬರು ಕುಳಿತುರುವುದನ್ನು ಕಂಡ ಅನ್ಯಕೋಮಿನ ಯುವಕರ ಗುಂಪು ಆಗ ಹುಡುಗಿಯೊಂದಿಗೆ ಏಕೆ ಕುಳಿತಿದ್ದೀಯಾ? ಎಂದು ಯುವಕನ ಜತೆಗೆ ದುಷ್ಕರ್ಮಿಗಳ ಗುಂಪು ತಂಟೆ ತೆಗೆದಿದೆ. ಈ ವೇಳೆ ನಾವು ಪ್ರೇಮಿಗಳಲ್ಲ, ಅಕ್ಕ, ತಮ್ಮ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.
ಆದರೂ ಇವರಿಬ್ಬರ ಮಾತು ಕೇಳಿಲ್ಲ. ಅಲ್ಲದೇ ತನ್ನ ಚಿಕ್ಕಪ್ಪನಿಗೂ ಫೋನ್ ಮಾಡಿಸಿ ನಾವಿಬ್ಬರೂ ಅಕ್ಕ, ತಮ್ಮ ಎಂದು ಖಚಿತಪಡಿಸಿದ್ದಾರೆ. ೧೭ಕ್ಕೂ ಹೆಚ್ಚು ಜನರ ಗುಂಪು ಇಬ್ಬರನ್ನು ಪ್ರತ್ಯೇಕವಾಗಿ ಅಲ್ಲಿಯೇ ಕೋಟೆ ಕೆರೆಯ ಶೆಡ್ನಲ್ಲಿ ಕೂಡಿ ಹಾಕಿ ಸುಮಾರು ಮೂರು ಗಂಟೆಗಳ ಕಾಲ ಅಕ್ಕ, ತಮ್ಮನ ಮೇಲೆ ದುಷ್ಕರ್ಮಿಗಳ ಗುಂಪೊAದು ಕಬ್ಬಿಣದ ರಾಡ್, ಕಟ್ಟಿಗೆಯಿಂದ ಮಾರಣಾಂತಿಕವಾಗಿ ಥಳಿಸಿ ನೈತಿಕ ಪೊಲೀಸ್ಗಿರಿ ಪ್ರದರ್ಶಿಸಿದ್ದಾರೆ.
ಕೆಲಹೊತ್ತಿನ ಬಳಿಕ ಮತ್ತೆ ಯುವಕ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕೂಡಲೇ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಮತ್ತೊಂದೆಡೆ, ಕೋಟೆ ಕೆರೆ ಬಳಿಕ ಅವರ ಮನೆಯವರು ಬಂದು, ಸುತ್ತಲೂ ಹುಡುಕಾಟ ನಡೆಸಿದ್ದಾರೆ. ಆಗ ಕಿರುಚಾಟದ ಶಬ್ದ ಕೇಳಿಸಿ ಶೆಡ್ನೊಳಗೆ ತೆರಳಿ ಇಬ್ಬರನ್ನೂ ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ನಗರದ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.