ಅಥಣಿ:- ಇವತ್ತೀನ ರಾಜಕಾರಣ ಅಂದಿನಂತಿಲ್ಲ ಎಲ್ಲಡೆ ಕುಲುಶಿತ ವಾತವರಣ ನಿರ್ಮಾಣಗೊಳ್ಳುತ್ತಿದೆ ಅಂದು ನಮ್ಮಗಳ ಪಕ್ಷಗಳು ಬೇರೆ ಬೇರೆ ಆಗಿದ್ದರೂ ಒಬ್ಬರು ಇನ್ನೊಬ್ಬರ ಮನೋಭಾವನೆಗಳನ್ನು ಅರಿಯುವ ಮತ್ತು ಗೌರವಿಸುವ ಪ್ರರ್ವತಿಯಿಂದ ಗೆಳೆಯರ ನಡುವೆ ಸಂಘರ್ಷಗಳಿಗೆ ಅವಕಾಶ ಇರುತ್ತಿರಲಿಲ್ಲ ಆದರೆ ಇಂದು ಆ ವಾತವರಣ ಉಳಿದು ಕೊಂಡಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಜರುಗಿದ ಕಾಂಗ್ರೇಸ್ ಮುಖಂಡ ದಿ.ಅಪ್ಪಸಾಹೇಬ ದೇಸಾಯಿಯವರ ಸ್ಮಣಾರ್ಥವಾಗಿ ಅವರ ಅಣ್ಣ ರಚನೆಯ ವಿರಚಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು,ಇಂದು ಮನುಷ್ಯ ಸ್ವಾರ್ಥ ಮತ್ತು ಸಂಕುಚಿತ ಭಾವನೆ ಹೊಂದಿದ ಕಾರಣದಿಂದ ಜೀವನ ವ್ಯವಸ್ಥೆ ಹಾಳಾಗುತ್ತಿದೆ.
ಇಂದು ರಾಜಕಾರಣದಲ್ಲಿ ಐಶ್ವರ್ಯದ ಆರಾಧನೆ ಮತ್ತು ದುರಾಸೆಯ ಬೆನ್ನು ಹತ್ತಿ ಹೊರಟಿದೆ ನಮ್ಮಲ್ಲಿ ಸದ್ವಚಾರ ಮೌಲ್ಯಗಳನ್ನು ಎತ್ತಿ ಹಿಡಿದಾಗ ಮಾತ್ರ ದುಷ್ಟ ಶಕ್ತಿಗಳ ಪ್ರಾಬಲ್ಯ ಕಡಿಮೆ ಆಗಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಪ್ಪಾಸಾಹೇಬ ದೇಸಾಯಿ ವಿಶ್ವಾಸರ್ಹ ರಾಜಕಾರಣಿ, ಗೆಳತನಕ್ಕೆ ಅತೀ ಗೌವರವ ಕೊಡುವ ವ್ಯಕ್ತಿಯಾಗಿದ್ದರು ಸ್ಥಳೀಯ ಚುನಾವಣೆ ಸಮಯದಲ್ಲಿ ಸಹಕಾರಿಯಾಗಿದ್ದ ಸ್ನೇಹ ಜೀವಿ ನಿಷ್ಕಳಂಕ ಭಾವ ಬಡವರ ಕುರಿತು ಅವರಿಗೆ ಅತ್ಯಂತ ಅನುಕಂಪ ಇರುತ್ತಿತ್ತು ಮನಸ್ಸಿನಲ್ಲಿ ಎಂದು ಕಪಟತನ ವಿರಲಿಲ್ಲ. ಇಂತಹ ವ್ಯಕ್ತಿಯ ಜೀವನ ಕುರಿತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಗಳಾಗಿರುವದು ಹೆಮ್ಮೆಯನ್ನುಂಟು ಮಾಡಿದೆ ಎಂದರು.
ಈ ವೇಳೆ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ ರಾಜಕಾರಣಿಗಳ ಬದುಕು ಅಂದಿನಂತಿಲ್ಲ ವಿಶ್ವಾರ್ಹ ರಾಜಕಾರಣ ಮಾಡುವುದು ದುಸ್ಥರವಾಗಿದೆ ನಾವು ನಮ್ಮ ಬದುಕು ಮನೆಗೆ,ಸಮಾಜಕ್ಕೆ ಗೌರವ ತರುವ ರೀತಿಯಲ್ಲಿ ಬದುಕಬೇಕು ಸಮಾಜ ಹೌದಹೌದು ಅನ್ನುವಂತೆ ಬದುಕಬೇಕು ಎಂದರು.