ಬೆಂಗಳೂರು:- ಅನಾಹುತಗಳ ಬಳಿಕ ಎಚ್ಚತ್ತ ಬಿಎಂಆರ್ಸಿಎಲ್ ಪ್ರಯಾಣಿಕರನ್ನು ಟ್ರ್ಯಾಕ್ಗಳಿಂದ ದೂರವಿರಿಸಲು ಹ್ಯಾಂಡ್ ರೇಲಿಂಗ್ಗಳ ಅಳವಡಿಕೆ ಮಾಡಲು ಮುಂದಾಗಿದೆ. ಬಿಎಂಆರ್ಸಿಎಲ್ ತನ್ನ ನಿಲ್ದಾಣಗಳ ಪ್ಲಾಟ್ಫಾರ್ಮ್ಗಳ ಉದ್ದಕ್ಕೂ ಸ್ಟೀಲ್ ಹ್ಯಾಂಡ್ ರೇಲಿಂಗ್ಗಳನ್ನು ಅಳವಡಿಸಲು ಮುಂದಾಗಿದೆ. ಇತ್ತೀಚೆಗಷ್ಟೆ ಪ್ರಯಾಣಿಕರು ಹಳಿಗಳಿಗೆ ಇಳಿದ ಘಟನೆಗಳಿಂದ ಎಚ್ಚೆತ್ತ ಬಿಎಂಆರ್ಸಿಎಲ್ ಈ ನಿರ್ಧಾರಕ್ಕೆ ಬಂದಿದೆ.
ಪ್ರಯಾಣಿಕರು ಹಳಿಗಳ ಮೇಲೆ ಇಳಿಯುವುದರಿಂದ ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿ ಪೀಕ್ ಅವರ್ಗಳಲ್ಲಿ ರೈಲು ಸೇವೆಗಳಲ್ಲಿ ಅಡಚಣೆಗೆ ಆಗುವುದರಿಂದ ಬಿಎಂಆರ್ಸಿಎಲ್ ಈ ಕ್ರಮಕ್ಕೆ ಮುಂದಾಗಿದೆ.
ಭದ್ರತಾ ತಪಾಸಣೆಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಮಾಡುವುದರ ಹೊರತಾಗಿಯೂ ಹಂತ-1ಗಾಗಿ ಪ್ಲಾಟ್ಫಾರ್ಮ್ ಗೇಟ್ಗಳ ಸ್ಥಾಪನೆ ಮಾಡಲು ಮುಂದಾಗಿದೆ. ಹಂತ-2ರ ಸುರಂಗ ಕಾರಿಡಾರ್ಗಾಗಿ ಪ್ಲಾಟ್ಫಾರ್ಮ್ ರೀಲಿಂಗ್ ಅಳವಡಿಕೆಗಾಗಿ ಟೆಂಡರ್ಗಳನ್ನು ಆಹ್ವಾನಿಸಲಾಗಿದೆ.
ಇನ್ನು ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್ ಅವರು, “ಜನನಿಬಿಡ ನಿಲ್ದಾಣಗಳ ಪ್ಲಾಟ್ಫಾರ್ಮ್ಗಳ ಉದ್ದಕ್ಕೂ ಜನರು ಹಳಿಗಳಿಗೆ ಪ್ರವೇಶಿಸುವುದನ್ನು ತಡೆಯಲು ನಾವು ಸ್ಟೀಲ್ ಹ್ಯಾಂಡ್ ರೇಲಿಂಗ್ಗಳನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ. ಅವುಗಳನ್ನು ಪ್ಲಾಟ್ಫಾರ್ಮ್ಗಳ ಅಂಚಿನಲ್ಲಿ ಇರಿಸಲಾಗುವುದು. ರೈಲುಗಳ ಬಾಗಿಲು ತೆರೆಯುವ ಸ್ಥಳಗಳಲ್ಲಿ ಯಾವುದೇ ರೇಲಿಂಗ್ಗಳಿಲ್ಲ,” ಎಂದು ಹೇಳಿದರು.
ಹಾಗೆಯೇ ಹಂತ-1 ರ ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಗೇಟ್ಗಳನ್ನು ಹೊಂದಲು ಸಹ ನೋಡುತ್ತಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುಮೋದನೆ ಪಡೆದು ನಂತರ ಟೆಂಡರ್ ಕರೆಯಬೇಕು. ಇದಕ್ಕೆ ಸಮಯ ಬೇಕಾಗುತ್ತದೆ. ಹಂತ-2ರ ಸುರಂಗ ಕಾರಿಡಾರ್ ಗಾಗಿ ಪ್ಲಾಟ್ಫಾರ್ಮ್ ಬಾಗಿಲುಗಳಿಗಾಗಿ ಟೆಂಡರ್ಗಳನ್ನು ಆಹ್ವಾನಿಸಲಾಗಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ.