ಶ್ರೀ ಅಡಿವೆಪ್ಪ ಗುರುಸ್ವಾಮಿಗಳ ಆಶೀರ್ವಾದದೊಂದಿಗೆ ಶ್ರೀ ಅಯ್ಯಪ್ಪ ಭಕ್ತ ವೃದ ಚಿಕ್ಕೌಂಶಿ ಹೊಸೂರ ಸನ್ನಿಧಿಯಲ್ಲಿ 37 ನೇ ವರ್ಷದ ಶಬರಿಮಲೈ ಯಾತ್ರೆಯ ಪ್ರಯುಕ್ತ ಜನವರಿ 10 ರಂದು ಹಾನಗಲ್ಲ ತಾಲೂಕ ಚಿಕ್ಕೌಂಶಿ ಹೊಸೂರ ಗ್ರಾಮದ ಅಯ್ಯಪ್ಪ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿಗಳಿಂದ ಮಹಾಪಡಿಪೂಜೆ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ಶ್ರೀ ಅಡಿವೆಪ್ಪ ಗುರು ಸ್ವಾಮಿಗಳ ಅಮೃತ ಹಸ್ತದಿಂದ ಇರುಮುಡಿ ಕಟ್ಟುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,
ನಂತರ ಸ್ವಾಮಿಗಳು ಶಬರಿ ಮಲೆ ಯಾತ್ರೆಗೆ ಹೊರಡುವರು. ಕಾರಣ ಈ ಎಲ್ಲ ಕಾರ್ಯಕ್ರಮಗಳಲ್ಲಿ ಯಾವತ್ತೂ ಸದ್ಭಕ್ತರು ತನು-ಮನ-ಧನದಿಂದ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿ ಸ್ವಾಮಿಯ ಕೃಪೆಗೆ ಪಾತ್ರರಾಗಬೆಕೆಂದು ಸನ್ನಿಧಿಯ ಸ್ವಾಮಿಗಳು ವಿನಂತಿಸಿಕೊಡಿದ್ದಾರೆ.
ನೂತನ ಕಮೀಟಿ ರಚನೆ-
ವೀರ ಮಣಿಕಂಠ ಸೇವಾ ಸಮಿತಿಯ ಟ್ರಸ್ಟನ್ನು ಪುನರಚನೆ ಮಾಡಲಾಗಿದ್ದು ನೂತನವಾಗಿ ಮಂಜು ಗುರುಸ್ವಾಮಿಗಳು ಅಧ್ಯಕ್ಷರಾಗಿ ಡಾಕ್ಟರ್ ಸುಶೀಲಾ ಸ್ವಾಮಿಗಳು ಅವರು ಉಪಾಧ್ಯಕ್ಷರಾಗಿ ಶಿವರಾಜ್ ಸಜ್ಜನ್ ಸ್ವಾಮಿಗಳು ಕಾರ್ಯದರ್ಶಿಯಾಗಿ ನೇಮಕವಾಗಿದ್ದು
ಶಂಕರಸ್ವಾಮಿ ಬಡೀಗೇರ, ಚಂದ್ರುಸ್ವಾಮಿ ಕ್ಯಾಸನೂರ,ಪುಟ್ಟು ಸ್ವಾಮಿ ಮೂಡೂರ,ಹರಿಶ್ ಬಾಂಡೆಸ್ವಾಮಿ ಪ್ರವೀಣಸ್ವಾಮಿ ಹೋಸೂರ, ಸುನೀಲ್ ಸ್ವಾಮಿ ಈಳಗೇರ, ವಿನಾಯಕ ಪಟ್ಟಣದಸ್ವಾಮಿ, ಮಂಜು ದಾಂಡೇಲಿ ಸ್ವಾಮಿ, ಲೋಕಪ್ಪ ಕಲವೀರ ಸ್ವಾಮಿ, ಸುನೀಲ್ ಜೋಗೆರ್ ಸ್ವಾಮಿ, ಮಲ್ಲಿಕಸ್ವಾಮಿ ಬಿಳಗಲಿ, ಹೊನ್ನಪ್ಪಸ್ವಾಮಿ ಗಳನ್ನು ನೀರ್ದೇಶಕರನ್ನಾಗಿ ಎಲ್ಲಾ ಸ್ವಾಮಿಗಳ ಸಮ್ಮುಖದಲ್ಲಿ ಆಯ್ಕೆಮಾಡಲಾಯಿತು…