ಬೆಂಗಳೂರು: ಬೀದಿ ತುಂಬಾ ಬಣ್ಣದ ಚಿತ್ತಾರ.. ..ನೂರಾರು ಕಲಾವಿದರ ಸಮಾಗಮ….. ಕಣ್ಣು ಕೋರೈಸುವ ಚಿತ್ರಕಲೆಯ ಸಂಗಮ.. ಹೌದು.. ನಾವು ಹೇಳೋಕೆ ಹೊರಟಿರೋದು ಬೆಂಗಳೂರು ಚಿತ್ರಸಂತೆಯ ಬಗ್ಗೆ.. ಇಂದು 21 ನೇ ಚಿತ್ರಸಂತೆಗೆ ಚಿತ್ರಕಲಾ ಪರಿಷತ್ತು ಸಾಕ್ಷಿಯಾಗಿತ್ತು.. ಹಾಗಿದ್ರೆ ಈ ಬಾರಿಯ ಚಿತ್ರಸಂತೆಯಲ್ಲಿ ಏನೆಲ್ಲಾ ವಿಶೇಷತೆ ಇತ್ತು ಅಂತ ನೋಡ್ಕೊಂಡು ಬರೋಣ ಬನ್ನಿ.. ಎಲ್ಲಿ ನೋಡಿದರೂ ಬಣ್ಣ ಬಣ್ಣ. ರಸ್ತೆಯ ಎರಡೂ ಬದಿಗಳಲ್ಲಿ ಜೋಡಿಸಿಟ್ಟ ಪೇಟಿಂಗ್ ಗಳು ಒಂದೊಂದು ಕತೆಯನ್ನ ಹೇಳುವಂತಿರುತ್ತದೆ.
ಆಯಾ ವರ್ಷ ನಡೆದ ಪ್ರಮುಖ ಬೆಳವಣಿಗೆ, ಭಾರತೀಯ ಸಂಸ್ಕೃತಿ ಸಾರುವ ಕಲಾಪ್ರಕಾರಗಳು, ವನ್ಯಜೀವಿ, ಮಗು, ಗ್ರಾಮೀಣ ಜೀವನ ಹೀಗೆ ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಿಷಯವೂ ಅಲ್ಲಿ ಚಿತ್ರವಾಗಿ ರೂಪ ತೆರದಿತ್ತು. ಹೌದು ಸಾವಿರ ಪದಗಳಲ್ಲಿ ಹೇಳೋ ವಿಷಯವನ್ನ ಒಂದೇ ಒಂದು ಕಲಾಕೃತಿ ಹೇಳುತ್ತೆ. ಆ ಒಂದೊಂದು ಕಲಾಕೃತಿಯೂ ನೂರಾರು ಅರ್ಥವನ್ನ ನೀಡುತ್ತೆ. ಕಲಾವಿದನ ಕಲ್ಪನೆ ಮತ್ತು ಕಲಾರಸಿಕರ ಕಲಾರಾಧನೆ ಮಿಳಿತಗೊಳ್ಳುವ ಬಣ್ಣದ ಹಬ್ಬವೇ ಈ ಚಿತ್ರಸಂತೆ..
India’s richest person: ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ
ಹೌದು.. ಇಂದು ಬೆಂಗಳೂರಿನ ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ 21 ನೇ ಚಿತ್ರಸಂತೆಯನ್ನ ಆಯೋಜಿಸಲಾಗಿತ್ತು.ಪ್ರತಿ ವರ್ಷ ಜನವರಿ ಮೊದಲ ವಾರದಲ್ಲಿ ನಡೆಯುವ ಚಿತ್ರಸಂತೆಯಲ್ಲಿ ನಾನಾ ರಾಜ್ಯದ ಕಲಾವಿದರು ಪಾಲ್ಗೊಂಡು ತಮ್ಮ ಕಲಾಕೃತಿಗಳನ್ನ ಪ್ರದರ್ಶ ಮಾಡುತ್ತಾರೆ. ಅದೇ ರೀತಿಯಲ್ಲಿ ಈ ಬಾರಿಯೂ ಕೂಡ ಬಾರಿ ಕೂಡ 21 ರಾಜ್ಯಗಳಿಂದ 12500 ಕಲಾವಿದರು ಭಾಗಿಯಾಗಿದ್ರು. ಕಾರ್ಯಕ್ರಮವನ್ನು ಸಿಎಂ ಉದ್ಗಾಟನೆ ಮಾಡಿದರು. ಚಿತ್ರಸಂತೆ ನೋಡಲು ಹಲವು ಗಣ್ಯರು ಆಗಮಿಸಿದ್ರು.