ಹುಬ್ಬಳ್ಳಿ: ಈ ಸರ್ಕಾರ ದಬ್ಬಾಳಿಕೆಯ ಸರ್ಕಾರ. ಮುಖ್ಯಮಂತ್ರಿಗಳು, ಮಂತ್ರಿಗಳ ಭಾಷೆ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ಆಗ್ತಿದೆ. ಅನ್ಯಾಯದ ವಿರುದ್ದ ಹೋರಾಟ ಮಾಡಿದ್ರೆ ಕೇಸ್ ಹಾಕ್ತೀದಾರೆ. ಸರ್ಕಾರದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ ಇದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು..
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಯ ಹುಟ್ಟಿಸೋ ಪ್ರಯತ್ನ ಇದೆ. ಅದರಲ್ಲಿ ಶ್ರೀಕಾಂತ್ ಪೂಜಾರಿ ಕೇಸ್ ಒಂದು. ಯಾವದೇ ಕೇಸ್ ಇಲ್ಲ ಅಂದ್ರು,ಒಳಗಡೆ ಹಾಕಿದ್ರು. ಇದು ಎಮರ್ಜೆನ್ಸಿ ಅಲ್ಲಿ ಮಾತ್ರ ಸಾಧ್ಯ. ಅವರನ್ನು ಒಳಗಡೆ ಹಾಕಿದ ಅಧಿಕಾರಿ,ಮಂತ್ರಿಗಳು ಕ್ಷಮೆ ಕೇಳಲಿಲ್ಲ. ಇದನ್ನು ಜನರು ಗಮನಿಸುತ್ತಿದ್ದಾರೆ ಎಂದರು.
ಏಳೇ ತಿಂಗಳಲ್ಲಿ ಅಧಿಕಾರದ ಮದ ಏರಿದೆ. ಸರ್ಕಾರದ ದಾಷ್ಯ ಹೆಚ್ಚಾಗಿದೆ. ಸರ್ಕಾರದ ವಿರುದ್ದ ನಾವು ಹೋರಾಟ ಮಾಡ್ತೀವಿ. ನಾಳೆ ಚಿಂತನ ಮಂಥನ ಇದೆ, ಅಲ್ಲಿ ಹೋರಾಟದ ಬಗ್ಗೆ ಚರ್ಚೆ ಮಾಡ್ತೀವಿ. ಕಾಂಗ್ರೆಸ್ ಗೆ ರಾಮ ಮಂದಿರ ಆಗಬಾರದು ಅನ್ನೋ ಆಸೆ ಇತ್ತು. ಹರಿಪ್ರಸಾದ್ ಅವರು ಗೋಧ್ರಾ ಬಗ್ಗೆ ಮಾತಾಡ್ತಾರೆ. ಅವರ ಕಡೆ ಮಾಹಿತಿ ಇದ್ದರೆ ಅವರು ಯಾಕೆ ಮಾಹಿತಿ ಕೊಡತಿಲ್ಲ ಎಂದ ಅವರು,
ಹರಿಪ್ರಸಾದ್ ಮಾತಾಡಿದ ಮೇಲೆ ಇವರ INDIA ಒಕ್ಕೂಟದ ನಾಲ್ಕೈದು ಜನ ಮಾತಾಡಿದ್ರು. ಅಕಸ್ಮಾತ್ ಕರ್ನಾಟಕದಲ್ಲಿ ಏನಾದರೂ ಆದ್ರೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಅವರು ಹೇಳಿದರು. ಪುನೀತ್ ಕೆರಹಳ್ಳಿ ಬಳಸಿ ಕೋಮು ಗಲಭೆಗೆ ಪತ್ವಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಿಜವಾದಿ ಕೋಮುವಾದಿ ಅಂದ್ರೆ ಅದು ಕಾಂಗ್ರೆಸ್. ಬಿಜೆಪಿ ಕೋಮುವಾದಿ ಅಂತಾರೆ,ಅದ್ರೆ ನಿಜವಾದ ಕೋಮುವಾದಿ ಕಾಂಗ್ರೆಸ್ ಎಂದು ಕಿಡಿ ಕಾರಿದರು.