ಮುಂಬೈ: ಬಿಜೆಪಿ ಶಾಸಕ ಸುನೀಲ್ ಕಾಂಬ್ಳೆ (Sunil Kamble) ಮಹಾರಾಷ್ಟ್ರದ (Maharastra) ಪುಣೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಪುಣೆಯ ಸಾಸೂನ್ ಆಸ್ಪತ್ರೆಯಲ್ಲಿ ತೃತೀಯಲಿಂಗಿ ಆರೈಕೆಗಾಗಿ ವಿಶೇಷ ವಾರ್ಡ್ ಅನ್ನು ಸಿದ್ಧಪಡಿಸಲಾಗಿದೆ. ಇದನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಪುಣೆ ಜಿಲ್ಲೆಯ ಉಸ್ತುವಾರಿ ಸಚಿವ ಅಜಿತ್ ಪವಾರ್ (Ajit Pawar) ಉದ್ಘಾಟಿಸಿದರು. ಕಾರ್ಯಕ್ರಮದ ಸ್ಥಳದಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಸುನೀಲ್ ಕಾಂಬ್ಳೆ ಅಸಮಾಧಾನ ವ್ಯಕ್ತಪಡಿಸಿದರು.
In a viral video, an incident occurred in a program which saw presence of Deputy Chief Minister Ajit Pawar, where BJP MLA Sunil Kamble slapped a police officer. #bjp #BJPMLA #SunilKamble #Pune #AjitPawar #PuneBJP #Policeofficer #Punecity #आमदार #सुनीलकांबळे @BJP4Maharashtra… pic.twitter.com/obL0ggS6Z0
— Pune Pulse (@pulse_pune) January 5, 2024
ಇದಾದ ಬಳಿಕ ವೇದಿಕೆಯಿಂದ ಕೆಳಗಿಳಿಯುವಾಗ ಕಾಂಬ್ಳೆಯವರು ಎಡವಿ ಬಿದ್ದರು. ಇದೇ ಕೋಪದ ಕ್ಷಣದಲ್ಲಿ ಘಟನಾ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಆ ಸಮಯದಲ್ಲಿ ನಿಜವಾಗಿಯೂ ಏನಾಯಿತು ಎಂದು ಯಾರಿಗೂ ಅರ್ಥವಾಗಲಿಲ್ಲ.
ಆದರೆ ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕಾರ್ಯಕ್ರಮದಲ್ಲಿ ಸಚಿವ ಹಸನ್ ಮುಶ್ರೀಫ್, ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ, ಸಂಸದ ಸುನೀಲ ತಾಟಕರೆ, ಶಾಸಕ ಸುನೀಲ ಕಾಂಬಳೆ, ಶಾಸಕ ರವೀಂದ್ರ ಧಾಂಗೇಕರ, ಸಸೂನ್ ಆಸ್ಪತ್ರೆಯ ವಿನಾಯಕ ಕಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.