ನಮ್ಮ ಭವಿಷ್ಯತ್ತಿನ ದೃಷ್ಟಿಯಿಂದ, ಉತ್ತಮ ನಾಳೆಗಾಗಿ ಒಂದಷ್ಟು ಹಣ ಕೂಡಿಡುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಹೌದು 50 ರೂಪಾಯಿ ನಿಮಗೆ ಚಿಕ್ಕ ಮೊತ್ತ ಅಂತ ಅನ್ನಿಸಬಹುದು. ಆದ್ರೆ ಹೀಗೆ ಒಂದು ತಿಂಗಳು 50 ರೂ ಉಳಿಸಿದ್ರೆ 1500 ರೂಪಾಯಿ ಆಗಲಿದೆ. ಅದೇ ರೀತಿ ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿದ್ರೆ ಸೀಮಿತ ಆದಾಯ ಪಡೆಯಬಹುದಾಗಿದೆ.ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಸಣ್ಣ ಉಳಿತಾಯ ನಿಮಗೆ ದೊಡ್ಡ ಮೊತ್ತವನ್ನು ಹಿಂದಿರುಗಿಸುತ್ತದೆ. 29 ಅಕ್ಟೋಬರ್ 1996ರಂದು ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಆರಂಭಿಸಲಾಗಿತ್ತು.
ಈ ನಿಧಿ ಶೇ.11.47ರಷ್ಟು ಲಾಭವನ್ನು ನೀಡಿದೆ.ಕಳೆದ ಮೂರು ವರ್ಷಗಳಲ್ಲಿ ಈ ಸ್ಮಾಲ್ ಕ್ಯಾಪ್ ಫಂಡ್ ವಾರ್ಷಿಕ 47.25 ಶೇಕಡಾ ಆದಾಯವನ್ನು ನೀಡಿದೆ. ಇದು ಸಾಮಾನ್ಯ ಯೋಜನೆಗೆ ಅನ್ವಯಿಸುತ್ತದೆ. ಅದೇ ನೇರ ಯೋಜನೆಯಲ್ಲಿ ಶೇ.49.23ರಷ್ಟು ಆದಾಯ ಬಂದಿದೆ. ಇದು ಅತ್ಯಂತ ಹೆಚ್ಚಿನ ಆದಾಯ ಎಂದು ಹೇಳಬಹುದು.ಆನ್ಲೈನ್ ಮ್ಯೂಚುವಲ್ ಫಂಡ್ ಕ್ಯಾಲ್ಕುಲೇಟರ್ ಪ್ರಕಾರ, ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ನಲ್ಲಿ ಆರಂಭದಿಂದಲೂ ಪ್ರತಿ SIPಗೆ 1500 ರೂಪಾಯಿ ಇತ್ತು. ಈಗ ಆ ಮೊತ್ತ ರೂ. 30 ಲಕ್ಷ ತಲುಪುತ್ತಿತ್ತು.
ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ನಲ್ಲಿ ಮಾಡುವ ಹೂಡಿಕೆ ಹೂಡಿಕೆದಾರರಿಗೆ ಲಾಭವನ್ನ ನೀಡುತ್ತದೆ. ಈ ಹೂಡಿಕೆಯು ಮಾರುಕಟ್ಟೆಯ ಆಪಾಯವನ್ನು ಹೊಂದಿರುತ್ತದೆ. ಅಪಾಯ ಹೊಂದಿದ್ದರೂ ಹೂಡಿಕೆದಾರರಿಗೆ ಉತ್ತಮ ಆದಾಯ ನೀಡುತ್ತದೆ.ಈ ಮ್ಯೂಚುವಲ್ ಫಂಡ್ನಲ್ಲಿ 5 ರಿಂದ 10 ಸಾವಿರ ರೂಪಾಯಿವರೆಗ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆ ಹೆಚ್ಚಾದಲ್ಲಿ ಶೇ.12.45ರಷ್ಟನ್ನು ಬ್ಯಾಂಕಿಂಗ್ ಸ್ಟಾಕ್ಗಳಲ್ಲಿ ಹೂಡಿಕೆ ಮಾಡುತ್ತಾರೆ.
ನಂತರ ಶೇ.9.39ರಷ್ಟು ಎಫ್ಎಂಸಿಜಿ, ಪ್ರೊಡಕ್ಷನ್ನಲ್ಲಿ ಶೇ.6.74, ಲೋಹಗಳಲ್ಲಿ ಶೇ.5.74 ಫಾರ್ಮಾ ಹಾಗೂ ಇತರ ವಲಯಗಳಲ್ಲಿ ಶೇ.5.3ರಷ್ಟು ಹೂಡಿಕೆ ಮಾಡಲಾಗುತ್ತದೆ.ಐಟಿಸಿ, ಜಿಂದಾಲ್ ಸ್ಟೇನ್ಲೆಸ್, ಐಆರ್ಬಿ ಇನ್ಫ್ರಾ ಡೆವಲಪರ್ಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಆರ್ಬಿಎಲ್ ಬ್ಯಾಂಕ್, ಬಿಕೆಜೆ ಫುಡ್ಸ್, ಹಿಂದೂಸ್ತಾನ್ ಕಾಪರ್, ಎಚ್ಎಫ್ಸಿಎಲ್,
ಆರ್ಚಿಯನ್ ಕೆಮಿಕಲ್ ಇಂಡಸ್ಟ್ರೀಸ್, ಇಂಡಿಯಾ ಸಿಮೆಂಟ್ಸ್ಗಳಲ್ಲಿ ಭಾರಿ ಹೂಡಿಕೆ ಮಾಡಿದೆ.ಮ್ಯೂಚುವಲ್ ಫಂಡ್ ರಿಟರ್ನ್ ಷೇರು ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರುತ್ತದೆ. ಆದ್ದರಿಂದ ಹಣವನ್ನು ಹೂಡಿಕೆ ಮಾಡುವವರು ಮಾರುಕಟ್ಟೆಯ ಅಪಾಯದ ಬಗ್ಗೆ ತಿಳಿದಿರಬೇಕು. ಇಲ್ಲದಿದ್ದರೆ ಆರ್ಥಿಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ನಿಮ್ಮ ಹಣವೇ ಕಳೆದುಕೊಳ್ಳುವ ಸಾಧ್ಯತೆಗಳಿವೆ.