ಕಲಬುರಗಿ: ಅತ್ತ ಅಯ್ಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ರೆ ಇತ್ತ ಕಲಬುರಗಿಯಲ್ಲಿ ರಾಮ ಭಕ್ತರಿಂದ ಮಂತ್ರಾಕ್ಷತೆ ವಿತರಣೆ ಕಾರ್ಯ ಜೋರಾಗಿ ನಡೆದಿದೆ..
ಹೌದು. ಜನೆವರಿ 22 ರಂದು ರಾಮ ಮಂದಿರ ಉದ್ಘಾಟನೆಯಾಗಲಿದೆ ಆ ದಿನದಂದು ಸಂಭ್ರಮ ಆಚರಿಸಲು ಸಕಲ ತಯಾರಿ ನಡೆದಿದೆ.ಅದಕ್ಕಾಗಿ ಜಗತ್ ಬಡಾವಣೆ ಸೇರಿದಂತೆ ನಗರದ ಎಲ್ಲೆಡೆ ರಾಮ ಭಕ್ತರು ರಾಮ ಮಂದಿರದ ಫೋಟೋ ಸಹಿತ ಮಂತ್ರಾಕ್ಷತೆ ನೀಡಿ 22 ರಂದು ನಿಮ್ಮ ಮನೆಗಳಲ್ಲಿ ದೀಪ ಬೆಳಗಿಸುವಂತೆ ಎಲ್ಲರಲ್ಲೂ ಮನವಿ ಮಾಡಿದ್ದಾರೆ..