ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಸಿಬಿ ಭರ್ಜರಿ ಬೇಟೆಯಾಡಿದೆ. ಸ್ಪಾ (Spa) ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ (Prostitue) ದಂಧೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸುಮಾರು 10 ಜನ ಸಿಸಿಬಿ ಅಧಿಕಾರಿಗಳ (CCB Officers) ತಂಡ ಟಿನ್ ಫ್ಯಾಕ್ಟರಿ ಬಳಿ ಇರುವ ನಿರ್ವಾನ್ ಇಂಟರ್ ನ್ಯಾಷನಲ್ ಸ್ಪಾನ ಫಸ್ಟ್ ಫ್ಲೋರ್ ಹಾಗೂ 6ನೇ ಫ್ಲೋರ್ ನಲ್ಲಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಹೊರ ರಾಜ್ಯದಿಂದ ಬಂದು ಅನಿಲ್ ಎಂಬಾತ ಸ್ಪಾ ನಡೆಸುತ್ತಿದ್ದ.
Phone Pay ಯೂಸ್ ಮಾಡುತ್ತಿದ್ದೀರಾ : ಹಾಗಾದ್ರೆ ಈ ಸ್ಟೋರಿ ಮಿಸ್ ಮಾಡ್ದೆ ಒದಿ!
ಒಟ್ಟು 34 ರೂಂಗಳನ್ನು ಒಳಗೊಂಡ ಬಹುಮಹಡಿ ಕಟ್ಟಡದಲ್ಲಿ ಹೊರ ರಾಜ್ಯ, ಹೊರ ದೇಶದಿಂದ ಯುವತಿಯರು, ಮಹಿಳೆಯರನ್ನು ಕರೆಸಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ. ಸದ್ಯ ಮಾಲೀಕ ಅನಿಲ್ ಸೇರಿ ಒಟ್ಟು 44 ಮಹಿಳೆಯರು, 34 ಗಿರಾಕಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಾಲೀಕ ಅನಿಲ್ಗೆ ಸೇರಿದ ಮೂರುವರೆ ಕೋಟಿ ಮೌಲ್ಯದ ಬೆನ್ಜ್ ಕಾರನ್ನು ಸಿಸಿಬಿ ಸೀಜ್ ಮಾಡಿದೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.