ಕಲಬುರ್ಗಿ:- ಸದ್ಯ ಮೂರು ತಿಂಗಳವರೆಗೆ ಬೆಂಗಳೂರಿಗೆ ಹೋಗಲ್ಲ ಸಿಎಂಗೆ ಸಲಹೆ ಕೊಡಲ್ಲ ಅಂತ ಅಳಂದ ಶಾಸಕ ಹಾಗು ಸಿಎಂ ಸಲಹೆಗಾರ ಬಿಆರ್ ಪಾಟೀಲ್ ಹೇಳಿದ್ದಾರೆ..
ಕಲಬುರಗಿಯ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪಾಟೀಲ್ ಈಗ ಏನಿದ್ರೂ ಲೋಕ ಸಮರದತ್ತ ಗಮನ ಕೊಡ್ತೇನೆ.
ಹೀಗಾಗಿ ಎಐಸಿಸಿ ಅಧ್ಯಕ್ಷ ಖರ್ಗೆ ಸಾಹೇಬರ ಈ ಭಾಗದಲ್ಲಿ ಕಲಬುರಗಿ ಬೀದರ್ ಯಾದಗಿರಿ ಸೇರಿ ಕಲ್ಯಾಣದಲ್ಲಿ ಅತಿ ಹೆಚ್ಚು ಸೀಟ್ ಕಾಂಗ್ರೆಸ್ ಗೆಲ್ಲಬೇಕು.ಅದಕ್ಕಾಗಿ ನಾವೂ ನೀವು ಸೇರಿ ಈ ಕುರಿತು ಕೆಲಸ ಮಾಡೋಣ ಅಂದ್ರು..