ಧಾರವಾಡ: ಧಾರವಾಡದ ಕೆಲಗೇರಿ ಬಳಿ ಇರುವ ರೈಲ್ವೆ ಕ್ರಾಸಿಂಗ್ ಬಳಿ ಮೂರು ಬೈಕ್ಗಳ ಮಧ್ಯೆ ಡಿಕ್ಕಿ ಸಂಭವಿಸಿ ನಾಲ್ಕು ಜನ ಗಾಯಗೊಂಡಿದ್ದರು. ಈ ಗಾಯಾಳುಗಳ ನೆರವಿಗೆ ಸಚಿವ ಸಂತೋಷ ಲಾಡ್ ಅವರು ಧಾವಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೂರು ಬೈಕ್ಗಳಲ್ಲಿ ಒಟ್ಟು ಆರು ಜನ ಇದ್ದರು. ಹಿಂಬದಿಯಿಂದ ಒಂದಕ್ಕೊಂದು ಡಿಕ್ಕಿ ಹೊಡೆದು ನಾಲ್ಕು ಜನರಿಗೆ ಪೆಟ್ಟಾಗಿತ್ತು. ಗಾಯಾಳುಗಳು ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದರು. ಅದೇ ಮಾರ್ಗವಾಗಿ ಧಾರವಾಡಕ್ಕೆ ಬರುತ್ತಿದ್ದ ಸಂತೋಷ ಲಾಡ್ ಅವರು ಕೂಡಲೇ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.
Phone Pay ಯೂಸ್ ಮಾಡುತ್ತಿದ್ದೀರಾ : ಹಾಗಾದ್ರೆ ಈ ಸ್ಟೋರಿ ಮಿಸ್ ಮಾಡ್ದೆ ಒದಿ!
ಇಬ್ಬರು ಗಾಯಾಳುಗಳನ್ನು ತಮ್ಮದೇ ವಾಹನದಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ಮೂಲಕ ಅವರಿಗೆ ಧೈರ್ಯ ಹೇಳಿದ್ದಾರೆ. ಸ್ವತಃ ತಾವೇ ಜಿಲ್ಲಾ ಆಸ್ಪತ್ರೆಗೆ ತೆರಳಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಗಾಯಾಳುಗಳಲ್ಲಿ ಇಬ್ಬರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರೂ ಇದ್ದಾರೆ. ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಚಿವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.