ಚಾಮರಾಜನಗರ:- ಪಕ್ಷದ ಬೆಳವಣಿಗೆಯಲ್ಲಿ ವಿ ಸೋಮಣ್ಣ ಕೊಡುಗೆ ಅಪಾರ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಪಕ್ಷದಲ್ಲಿ ಸಂಪೂರ್ಣವಾಗಿ ಎಲ್ಲವೂ ಸರಿ ಹೋಗಿದೆ ಎಂದು ಹೇಳಿಲ್ಲ ಹೇಳುವುದು ಇಲ್ಲ. ಸಾಕಷ್ಟು ಬದಲಾವಣೆ ಆಗಲಿದೆ ಎಂದು ವಿ.ಸೋಮಣ್ಣ ಪರ ಬಿ.ವೈ.ವಿಜಯೇಂದ್ರ ಸಾಫ್ಟ್ ಕಾರ್ನರ್ ತೋರಿದ್ದಾರೆ.
ಸೋಮಣ್ಣ ಹಿರಿಯರಿದ್ದಾರೆ ಪಕ್ಷದ ಬೆಳವಣಿಗೆಗೆ ಅವರ ಕೊಡುಗೆ ಕೂಡ ಸಾಕಷ್ಟಿದೆ. 45 ವರ್ಷಗಳ ಸುದೀರ್ಘ ಅನುಭವ ಇರುವಂತ ರಾಜಕಾರಣಿ ಅವ್ರು. ಎರಡು ಕಡೆ ಸ್ಪರ್ಧಿಸಿ ಗೆಲವು ಸಾಧಿಸುತ್ತೇನೆಂಬ ವಿಶ್ವಾಸ ಇದ್ದಂತವರಿಗೆ ಎರಡುಕಡೆ ಸೋಲಾದ್ರೆ ನೋವಾಗುವುದು ಸಾಮಾನ್ಯ. ಸೋಲಿಗೆ ಬೇರೆ ಕಾರಣ ಇರಬಹುದು ಇಬ್ಬರು ಕುಳಿತು ಮಾತನಾಡುತ್ತೇವೆ ಎಂದು ಚಾಮರಾಜನಗರದಲ್ಲಿ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.