ಅಂತಿಮ ಹಂತ ತಲುಪಿರುವ ಬಿಗ್ ಬಾಸ್ ಸೀಸನ್ 10 ರ ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ವಾರದ ಕಥೆ ಕಿಚ್ಚನ ಜೊತೆಯ ಎಪಿಸೋಡ್ನಲ್ಲಿ ಸಂಗೀತಾ ಶೃಂಗೇರಿ ಕಾರ್ತಿಕ್ ಮಹೇಶ್ ಬಗ್ಗೆ ಆರೋಪಗಳ ಸುರಿಮಳೆ ಗೈದಿದ್ದಾರೆ.
ಅಹಂಕಾರದಿಂದ ಮೆರೆಯೋದು ಹೇಗೆ ಎನ್ನುವುದು ಬೋರ್ಡ್ ಅನ್ನು ಕಾರ್ತಿಕ್ ಮಹೇಶ್ಗೆ ಕೊಟ್ಟ ಸಂಗೀತಾ, ಕಾರ್ತಿಕ್ಗೆ ಸಿಕ್ಕಾಪಟ್ಟೆ ಅಹಂಕಾರ ಜಾಸ್ತಿ ಎಂದಿದ್ದಾರೆ.
ಬೋರ್ಡ್ ತೆಗೆದುಕೊಂಡು ಮಾತಾಡಿದ ಕಾರ್ತಿಕ್ ಮಹೇಶ್, ತಾವು ಹೇಳಿದ್ದೆ ನಡೀಬೇಕು ಎನ್ನುವವರು ಅವರು, ಸಂಗೀತಾದಿಂದ ಅಹಂಕಾರದಿಂದ ಮೆರೆಯೋದು ಹೇಗೆ ಎನ್ನುವ ಪುಸ್ತಕ ಬರೆಯಬಹುದು ಎಂದು ಕಾರ್ತಿಕ್ ಹೇಳಿದ್ರು.
ಸುಳ್ಳಿನ ಅರಮನೆ ಕಟ್ಟೋದು ಹೇಗೆ ಎನ್ನುವ ಬೋರ್ಡ್ ಅನ್ನು ತುಕಾಲಿ ಸಂತೋಷ್ ಡ್ರೋನ್ ಪ್ರತಾಪ್ಗೆ ನೀಡಿದ್ದಾರೆ. ಪ್ರತಾಪ್ ಸುಮ್ನೆ ಬೋರ್ಡ್ ತೆಗೆದುಕೊಂಡಿದ್ದಾರೆ.
ಬೇರೆಯವರನ್ನು ತುಳಿದು ಬೆಳೆಯೋದು ಹೇಗೆ ಎನ್ನುವ ಬೋರ್ಡ್ ಅನ್ನು ಡ್ರೋನ್ ಪ್ರತಾಪ್, ವಿನಯ್ ಗೌಡಗೆ ನೀಡಿದ್ದಾರೆ. ಇದು ಅವರಿಗೆ ಸೂಕ್ತ ಎಂದು ನನಗೆ ಅನಿಸಿತು ಎಂದ್ರು.
ಅವರ ಜೊತೆ ಇದ್ದು ಅವರೇ ಸರಿ ಸರಿ ಎಂದವರೆಲ್ಲಾ ಮನೆಗೆ ಹೋದ್ರು. ಮನೆ ಬಿಟ್ಟವರ ಬೆಡ್ಶೀಟ್ ಎಲ್ಲಾ ಇವರ ಬೆಡ್ಗೆ ಸೇರಿದೆ ಎಂದು ಡ್ರೋನ್ ಟಾಂಗ್ ಕೊಟ್ರು.
ಇದೇ ವೇಳೆ ಡ್ರೋನ್ ಪ್ರತಾಪ್ರನ್ನು ವಿನಯ್ ಕಣ್ಣಲ್ಲೇ ಗುರಾಯಿಸಿದ್ದಾರೆ. ಡ್ರೋನ್ ಮಾತು ಕೇಳಿ ವಿನಯ್ ಕೂಡ ಶಾಕ್ ಆಗಿದ್ದಾರೆ.