ಬೆಂಗಳೂರು:- ಕರ್ನಾಟಕದಲ್ಲಿ ಇಂದು 297 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ 171 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ರೇಟ್ ಶೇಕಡಾ 4.3 ರಷ್ಟಿದೆ. ಇನ್ನುರಾಜ್ಯದಲ್ಲಿ ಕೊವಿಡ್ ಆಯಕ್ಟಿವ್ ಕೇಸ್ಗಳ ಸಂಖ್ಯೆ 1,136 ಇದೆ.
ಬೆಂಗಳೂರಿನಲ್ಲಿ 171 ಜನರಿಗೆ ಕೊರೊನಾ ದೃಢವಾಗಿದ್ದರೆ, ಇನ್ನುಳಿದಂತೆ ಬಾಗಲಕೋಟೆ 5, ಬಳ್ಳಾರಿ 6, ಬೆಂಗಳೂರು ಗ್ರಾಮಾಂತರ 12, ಚಾಮರಾಜನಗರ 2, ಚಿಕ್ಕಬಳ್ಳಾಪುರ 5, ಚಿತ್ರದುರ್ಗ 5, ದಕ್ಷಿಣ ಕನ್ನಡ 6, ದಾವಣಗೆರೆ 1, ಧಾರವಾಡ 8, ಗದಗ 2,
ಹಾವೇರಿ 4, ಕಲಬುರಗಿ 5, ಕೊಡಗು 1, ಕೋಲಾರ 3, ಕೊಪ್ಪಳ 8, ಮಂಡ್ಯ 6, ಮೈಸೂರು 26, ರಾಯಚೂರು 2, ರಾಮನಗರ 6, ಶಿವಮೊಗ್ಗ 4 , ತುಮಕೂರು 4, ವಿಜಯನಗರ 4, ವಿಜಯಪುರದಲ್ಲಿ 1 ಕೇಸ್ ಕಂಡುಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.