ಶಿವಮೊಗ್ಗ:– ಕರ್ನಾಟಕದಲ್ಲಿ ಅಯೋಧ್ಯೆ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತ ಆಗ್ತಿರೋದು ಬೇಸರದ ಸಂಗತಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅಯೋಧ್ಯೆ ರಾಮಮಂದಿರದ ಐತಿಹಾಸಿಕ ಕ್ಷಣವನ್ನು ಎಲ್ಲರೂ ಭಿನ್ನ ಭಿನ್ನ ರೂಪದಲ್ಲಿ ಆನಂದಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕರಸೇವಕರನ್ನು ಬಂಧಿಸುತ್ತಿದ್ದಾರೆ. ಕರ್ನಾಟಕ ಆಂಜನೇಯನ ಭೂಮಿ, ಇಂತಹ ಕರ್ನಾಟಕದಲ್ಲಿ ಅಯೋಧ್ಯೆ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತ ಆಗ್ತಿರೋದು ಬೇಸರದ ಸಂಗತಿ ಎಂದು ಹೇಳಿದರು.
ಶ್ರೀಕಾಂತ್ ಪೂಜಾರಿ ಮೇಲೆ ಒಂದೇ ಒಂದು ಕೇಸ್ ಇಲ್ಲ ಎಂದ ಸೂಲಿಬೆಲೆ, ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಕೊಡ್ತೀನಿ. ನೀವು ಬಂಧಿಸಿ ನಾವು ಹಳ್ಳಿ ಹಳ್ಳಿಯಲ್ಲಿ ಕರಸೇವಕರನ್ನು ಅಭಿನಂದಿಸುತ್ತೇವೆ, ಜಾಗೃತಿ ಮೂಡಿಸುತ್ತೇವೆ. ಸಿದ್ದರಾಮಯ್ಯ ಮುಸ್ಲಿಂರಿಗೆ 10 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಈಗಾಗಲೇ 1 ಸಾವಿರ ಕೋಟಿ ಕೊಟ್ಟಿದ್ದಾರೆ. ಮುಸ್ಲಿಂರಿಗೆ ಹಣ ಕೊಡಲು ದಲಿತರ ಹಣವನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದರು.
ಬಿಕೆ ಹರಿಪ್ರಸಾದ್ ಹಿಂದೂಗಳಲ್ಲಿ ಭಯ ಹುಟ್ಟಿಸುವ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ ಸೂಲಿಬೆಲೆ, ಮುಲಾಯಂ ಸಿಂಗ್ ಗೋಲಿಬಾರ್ ಮಾಡ್ತೀನಿ ಅಂದಾಗಲೇ ಕರಸೇವಕರು ಹೆದರಲಿಲ್ಲ. ದೇಶದಲ್ಲಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಇದೆ. ಯಾರ ಭಯವೂ ಇಲ್ಲ ಎಂದು ಹೇಳಿದರು.