ವಿಜಯಪುರ : ಗುಮ್ಮಟನರಿ ಎಂದೇ ಪ್ರಖ್ಯಾತವಾಗಿರುವ ವಿಜಯಪುರ ನಗರಕ್ಕೆ ಹುಸಿ ಬಾಂಬ್ ಬಂದಿರುವ ಘಟನೆ ನಿನ್ನೆ ಸಂಜೆ ನಡೆದಿದೆ
ಹೌದು ಕೆಲವು ದಿನಗಳ ಹಿಂದೆ ರಾಜ್ಯಾದ್ಯಂತ ಆತಂಕ ಮೂಡಿಸಿದ ಹುಸಿ ಬಾಂಬ್ ಈ ಮೇಲ್ ಇದೀಗ ವಿಜಯಪುರಕ್ಕು ಬಂದಿದೆ. ಐತಿಹಾಸಿಕ ಸ್ಮಾರಕ ಗೋಳಗುಮ್ಮಟದ ಮ್ಯೂಜಿಯಂ ಮತ್ತು ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಈ ಮೇಲ್ ಒಂದು ಗೋಳಗುಮ್ಮಟದ ಸಿಬ್ಬಂದಿಗಳಿಗೆ ಬಂದಿದ್ದಾರೆ.
ಸಿಬ್ಬಂಧಿಗಳು ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿದ್ದು ತಕ್ಷಣ ಬಾಂಬ್ ನಿಷ್ಕ್ರಿಯ ದಳದಿಂದ ಪರೀಶೀಲನೆ ನಡೆಸಿದ್ದು ಯಾವುದೇ ರೀತಿಯ ಸ್ಫೋಟಕ ವಸ್ತುಗಳು ಅಥವಾ ಬಾಂಬ್ ಪತ್ತೆಯಾಗಿಲ್ಲ ಇದೊಂದು ಹುಸಿ ಬಾಂಬ್ ಮೇಲ್ ಎನ್ನಲಾಗಿದೆ. ಇದನ್ನು ಟೆರರ್ ರೈ
ಸರ್ಸ್ ಹೆಸರಿನ ಮೇಲ್ ಮೂಲಕ ಸಂದೇಶ ಕಳುಹಿಸಲಾಗಿದ್ದು ಗೋಳಗುಮ್ಮಟ ಪೋಲೀಸರು ಪರೀಶೀಲನೆ ಮುಂದುವರೆಸಿದ್ದಾರೆ…