ಗದಗ: ಥರ್ಡ್ ಐ ಕ್ಯಾಮರಾದಿಂದ ತಪ್ಪಿಸಿಕೊಳ್ಳುವ ಬೈಕ್ ಸವಾರರಿಗೆ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಿದೆ. ಗದಗನಲ್ಲಿ ಕಳ್ಳದಾರಿ ಹಿಡಿದಿದ್ದ ಬೈಕ್ ಸವಾರರಿಗೆ ಸ್ಪೆಷಲ್ ಡ್ರೈವ್ ಮೂಲಕ ಚಾಟಿ ಬೀಸಿದ್ದಾರೆ.
ಸ್ವತಃ ಫಿಲ್ಡಿಗೆ ಇಳಿದ ಗದಗ ಎಸ್ಪಿ ಬಿ ಎಸ್ ನೇಮಗೌಡ ಅವರು ಸಿಪಿಐ, ಪಿಎಸ್ಐ ಗಳ ನೇತೃತ್ವದ 6 ತಂಡಗಳ ಮೂಲಕ ಸ್ಪೆಷಲ್ ಡ್ರೈವ್ ಮಾಡಿ ನಂಬರ್ ಪ್ಲೇಟ್ ಇಲ್ಲದೇ, ನಂಬರ್ ಪ್ಲೇಟ್ ಡಿಫೆಕ್ಟಿವ್ ಮಾಡಿ ಓಡಾಡ್ತಿದ್ದ ಬೈಕ್ ಸವಾರರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಸುಮಾರು 300 ಕ್ಕೂ ಹೆಚ್ಚು ಬೈಕ್ ಗಳನ್ನ ಸೀಜ್ ಮಾಡಿರೋ ಪೊಲೀಸರು ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ನಂಬರ್ ಫ್ಲೇಟ್ ಗೆ ಸ್ಟಿಕರ್ ಅಂಟಿಸಿರೋ ಬೈಕ್ ಸವಾರರಿಂದ ದಂಡ ವಸೂಲಿ ಮಾಡಿದ್ದಾರೆ.
ಇನ್ನೂ ಕೆಲ ಬೈಕ್ ಸವಾರರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ನೂರಾರು ಬೈಕ್ ಗಳು ಸೀಜ್ ಆಗಿದ್ರಿಂದಾಗಿ ಪೊಲೀಸ್ ಭವನದ ಆವರಣ ಬೈಕ್ ಸವಾರರಿಂದ ತುಂಬಿ ತುಳುಕುತ್ತಿತ್ತು.