ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಮತ್ತೆ ವಿಳಂಬವಾಗಲಿದೆ. ಬಹು ನಿರೀಕ್ಷಿತ ಆರ್ವಿ ರಸ್ತೆಯಿಂದ (RV Road) ಬೊಮ್ಮಸಂದ್ರ ನಮ್ಮ ಮೆಟ್ರೊ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಪೈಲೆಟ್ಲೆಸ್ ಸಂಚಾರಕ್ಕೆ ಇನ್ನೂ ಆರು ತಿಂಗಳು ಕಾಯಬೇಕಿದೆ. ಚೀನಾದಿಂದ ಬರಬೇಕಿದ್ದ ಮೆಟ್ರೋ ಬೋಗಿಗಳ ವಿಳಂಬದಿಂದಾಗಿ ಈ ಮಾರ್ಗದ ಲೋಕಾರ್ಪಣೆ ಮತ್ತೆ ತಡವಾಗುತ್ತಿದೆ.
ಹಿಂದೆ ಹಳದಿ ಮಾರ್ಗವನ್ನು ಫೆಬ್ರವರಿಯಲ್ಲಿ ಉದ್ಘಾಟನೆ ಮಾಡುತ್ತೇವೆ ಎಂದಿದ್ದ ಬಿಎಂಆರ್ಸಿಎಲ್ (BMRCL) ಈಗ ಜುಲೈನಲ್ಲಿ ಉದ್ಘಾಟನೆ ಮಾಡಲು ಮುಂದಾಗಿದೆ. ಇಲ್ಲಿ ಸಿವಿಲ್ ಕಾಮಗಾರಿ ಬಹುತೇಕ ಮುಗಿದಿದ್ದರೂ ಚೀನಾದಿಂದ ಮೆಟ್ರೋ ಬೋಗಿ ಪೂರೈಕಾ ಕಂಪನಿಯಿಂದ 2 ಪ್ರೋಟೋ ರೈಲು ಜೊತೆ ಎಂಜಿನಿಯರ್ ಬರಬೇಕಿದೆ
Namma Metro: ಬೆಂಗಳೂರು ಮೆಟ್ರೋ ನಿಲ್ದಾಣಗಳು ಎಷ್ಟು ಸೇಫ್..?: ಸೂಸೈಡ್ ಸ್ಪಾಟ್ ಆಯ್ತಾ?
ಚೀನಾದಿಂದ ಇನ್ನೂ ಅನುಮತಿ ಸಿಗದ ಕಾರಣ ಅಲ್ಲಿಂದ ಬೋಗಿಗಳು ಇನ್ನೂ ಬಂದಿಲ್ಲ. ಕೋಲ್ಕತ್ತಾದ ತೀತಾಘರ್ ವ್ಯಾಗನ್ ಕಂಪನಿಯು ಮೂಲಕ ಈ ಮಾರ್ಗಕ್ಕಾಗಿ 216 ಕೋಚ್ ಬರಬೇಕು ಇದು ಸಹ ಇನ್ನೂ ಕಾರ್ಯಚರಣೆಯಲ್ಲಿದೆ. ಚೀನಾದಿಂದ ಈ ತಿಂಗಳಾಂತ್ಯಕ್ಕೆ ಅಲ್ಲಿನ ಸಿಬ್ಬಂದಿ ಬರಲಿದ್ದಾರೆ.
ಚೀನಾದಿಂದ ಮೆಟ್ರೋ ಬೋಗಿ ಪೂರೈಕಾ ಕಂಪನಿ ಸಿಬ್ಬಂದಿಗೆ ಭಾರತ ವೀಸಾ ನೀಡಿದೆ. ಆದರೆ ಚೀನಾದ 2 ಪ್ರೋಟೋ ಟ್ರೈನ್ ಗಳು ಭಾರತಕ್ಕೆ ಬರಲು ಮುಹೂರ್ತ ನಿಗದಿಯಾಗಿಲ್ಲ. ಮೊದಲು ಹಡಗಿನ ಮೂಲಕ ಪ್ರೋಟೊ ಟ್ರೈನ್ ಚೆನ್ನೈ ಬಂದರನ್ನು ತಲುಪಬೇಕು. ನಂತರ ಅಲ್ಲಿಂದ ರಸ್ತೆಯ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋವನ್ನು ತಲುಪುತ್ತವೆ. ಅತ್ತ ತೀತಾಘರ್ ವ್ಯಾಗನ್ ಮೂಲಕ ಈ ಮಾರ್ಗಕ್ಕಾಗಿ 216 ಕೋಚ್ ಬರಬೇಕು. ತೀತಾಘರ್ ಉತ್ಪಾದನಾ ಘಟಕದಲ್ಲಿ ಚೀನಾ ರೈಲ್ವೈ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಕೋಚ್ ನಿರ್ಮಿಸುತ್ತಿದ್ದು ಟ್ರೈನ್ ಬಂದ ಮೇಲೆ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಅನುಮೋದನೆ ಪಡೆಯಬೇಕು