ಧಾರವಾಡ: ಬಾಲಕಿಗೆ ಕಂಡಕ್ಟರ್ ಕಪಾಳ ಮೋಕ್ಷ ಮಾಡಿದ ಆರೋಪ ಹಿನ್ನೆಲೆಯಲ್ಲಿ ಕಂಡಕ್ಟರ್ ವಿರುದ್ಧ ಬಾಲಕಿ ಪಾಲಕರು ಮತ್ತು ಗ್ರಾಮಸ್ಥರ ದಿಢೀರ್ ಪ್ರತಿಭಟನೆ ನಡೆಸಿದರು.
ಧಾರವಾಡ ಹೊರವಲಯದ ಕೆಲಗೇರಿ ಗ್ರಾಮದಲ್ಲಿ ಧಾರವಾಡದಿಂದ ಮುಗದ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಈ ವೇಳೆ ಹಣ ಎಣಿಸುತ್ತಿದ್ದ ಕಂಡಕ್ಟರ್ ತುಂಬಿದ ಬಸ್ನಲ್ಲಿ ಕಂಡಕ್ಟರ್ ಗೆ ಟಚ್ ಮಾಡಿದ ಬಾಲಕಿ ಆಗ ಕೆಳಗೆ ಬಿದ್ದ ಕಂಡಕ್ಟರ್ ಕೈಯಲ್ಲಿದ್ದ ಹಣ. ಇದರಿಂದ ಕೆರಳಿ ಬಾಲಕಿಗೆ ಕಪಾಳಮೋಕ್ಷ ಮಾಡಿದ ಕಂಡಕ್ಟರ್
ಕೆಲಗೇರಿಯಿಂದ ಶಾಲೆಗೆ ಹೋಗಿದ್ದ ಬಾಲಕಿ ಪ್ರಕೃತಿ ಶಾಲೆಯಿಂದ ಮರಳಿ ಬರುವಾಗ ನಡೆದಿದ್ದ ಘಟನೆಯಾಗಿದ್ದು ಕಂಡಕ್ಟರ್ ವರ್ತನೆಗೆ ಪಾಲಕರ ಮತ್ತು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸ್ ತಡೆದು ಪ್ರತಿಭಟನೆಗೆ ಮುಂದಾದ ಸ್ಥಳೀಯರು ಕೊನೆಗೆ ಪೊಲೀಸರ ಮಧ್ಯಪ್ರವೇಶ. ಗ್ರಾಮಸ್ಥರ ಮನವೋಲಿಕೆಗೆ ಯತ್ನಿಸಿದ ಪೊಲೀಸರು ಕಂಡಕ್ಟರ್ ಸ್ಥಳಕ್ಕೆ ಬಂದು ಕ್ಷಮೆ ಕೇಳುವಂತೆ ಪಟ್ಟು. ಕೊನೆಗೆ ಸ್ಥಳಕ್ಕೆ ಬಂದು ಕ್ಷಮೆ ಕೇಳಿದ ಕಂಡಕ್ಟರ್ ಕ್ಷಮೆ ಕೇಳಿದ ಹಿನ್ನೆಲೆ ಪ್ರತಿಭಟನೆ ವಾಪಸ್ ಕಂಡಕ್ಟರ್ ಕ್ಷಮಾಪಣೆ ಬಳಿಕ ಸುಖಾಂತ್ಯ ಕಂಡ ಪ್ರಕರಣ.