ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟಿರುವ ಬಾಲಿವುಡ್ ನ ಖ್ಯಾತ ನಟಿ ಜಾಹ್ನವಿ ಕಪೂರ್ (Jahnavi Kapoor) , ಪದೇ ಪದೇ ತಿರುಪತಿ ತಿಮ್ಮಪ್ಪನ (Tirupati Timmappa) ದರ್ಶನ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಒಬ್ಬರೇ ದರ್ಶನ ಮಾಡುತ್ತಿದ್ದವರು, ಈ ಬಾರಿ ಗೆಳೆಯ ಶಿಖರ್ ಪಹರಿಯಾ (Shikhar Paharia) ಜೊತೆ ತಿರುಪತಿಗೆ ಬಂದಿದ್ದರು. ಶುಕ್ರವಾರ ಬೆಳಗ್ಗೆ ಗೆಳೆಯನ ಜೊತೆ ಆಗಮಿಸಿದ್ದ ಅವರು, ಜೊತೆಯಾಗಿ ದರ್ಶನ ಮಾಡಿದ್ದಾರೆ.
ಹೊಸ ವರ್ಷವನ್ನು ಅವರು ತಿರುಪತಿಗೆ ತಿಮ್ಮಪ್ಪನ ಆಶೀರ್ವಾದ ಪಡೆಯುವ ಮೂಲಕ ಆಚರಿಸಿದ್ದಾರೆ. 2024 ಅನ್ನು ಹೊಸ ಕನಸಿನೊಂದಿಗೆ ಆರಂಭಿಸುತ್ತಿದ್ದೇನೆ ಎಂದು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಗೋಲ್ಡನ್ ಕಲರ್ ಸೀರೆಯುಟ್ಟು, ದೇವಸ್ಥಾನದ ಮುಂದೆ ನಿಂತು ಫೋಟೋ ತೆಗೆದುಕೊಂಡಿದ್ದಾರೆ
ಳೆಯ ಶಿಖರ್ ಪಹರಿಯಾ ಬಗ್ಗೆ ಜಾಹ್ನವಿ ಹಲವಾರು ಬಾರಿ ಮಾತನಾಡಿದ್ದಾರೆ. ಡೇಟಿಂಗ್ ವಿಚಾರ ಬಂದಾಗ, ಶಿಖರ್ ನನ್ನ ಇಡೀ ಕುಟುಂಬಕ್ಕೆ ಪರಿಚಿತರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇದೀಗ ಬಹಿರಂಗವಾಗಿಯೇ ಗೆಳೆಯನ ಜೊತೆ ದೇವಸ್ಥಾನಕ್ಕೂ ಬಂದಿದ್ದಾರೆ.