ಕಲಬುರಗಿ: ದಾಖಲೆ ಇಲ್ಲದೇ ಓಡಾಡುತಿದ್ದ 27 ಆಟೋಗಳನ್ನ ಕಲಬುರಗಿಯ ಟ್ರಾಫಿಕ್ ಪೋಲೀಸರು ಜಪ್ತಿ ಮಾಡಿದ್ದಾರೆ..ನಗರದ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಯಾವುದೇ ದಾಖಲೆ ಇಲ್ಲದಿರೋದು ಬೆಳಕಿಗೆ ಬಂದಿದೆ.
ಕೆಲವರು ದಾಖಲೆ ಇಲ್ಲದಿರುವುದು ಮತ್ತೆ ಕೆಲವರು ತಾಲೂಕು ಕೇಂದ್ರ ಅನುಮತಿ ಇದ್ರು ಸಿಟಿಯಲ್ಲಿ ಅಡ್ಡಾಡೋದು ಸಹ ಪತ್ತೆಯಾಗಿದೆ.ಹೀಗೆ ಪೋಲೀಸರ ಕಣ್ತಪ್ಪಿಸಿ ಸಂಚರಿಸುತ್ತಿದ್ದ ಆಟೋಗಳನ್ನ ಜಪ್ತಿ ಮಾಡಿ ಆರ್ ಟಿಓ ಅಧಿಕಾರಿಗಳ ಸುಪರ್ದಿಗೆ ಕೊಟ್ಟಿದ್ದಾರೆ..