ಟೆಹ್ರಾನ್: ಇರಾನ್ನಲ್ಲಿ ಅವಳಿ ಬಾಂಬ್ ಸ್ಫೋಟಗೊಂಡು 103 ಮಂದಿ ಸಾವನ್ನಪ್ಪಿ, 141 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಇರಾನ್ನ ದಕ್ಷಿಣ ನಗರಿ ಕೆರ್ಮಾನ್ನಲ್ಲಿ ಕಮಾಂಡರ್ ಕಾಸ್ಸೇಮ್ ಸೋಲೈಮನಿ (Iranian general Qasem Soleimani) ಅವರ ಸ್ಮರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ದುರ್ಘಟನೆ ನಡೆದಿದ್ದು, ಭಾರೀ ಆತಂಕವನ್ನೂ ಸೃಷ್ಟಿ ಮಾಡಿದೆ.
2020ರಲ್ಲಿ ಅಮೆರಿಕಾವು ಬಾಗ್ದಾದ್ದ ವಿಮಾನ ನಿಲ್ದಾಣದ ಮೇಲೆ ಡ್ರೋಣ್ ದಾಳಿ (US drone strike in Iraq) ನಡೆಸಿತ್ತು. ಈ ದಾಳಿಯಲ್ಲಿ ಕಮಾಂಡರ್ ಕಾಸ್ಸೇಮ್ ಸೋಲೈಮನಿ ಹತರಾಗಿದ್ದರು. ಇವರ ಸ್ಮರಣಾರ್ಥ ಕಾರ್ಯಕ್ರಮವನ್ನು ಪ್ರತಿ ವರ್ಷ ಇರಾನ್ನಲ್ಲಿ ಆಯೋಜಿಸಲಾಗುತ್ತಿದೆ. ಕೆರ್ಮಾನ್ನಲ್ಲಿರುವ ಕಾಸ್ಸೇಮ್ ಸೋಲೈಮನಿ ಅವರ ಸ್ಮಾರಕದ ಬಳಿಯೇ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಈ ವರ್ಷದ ಕಾರ್ಯಕ್ರಮವನ್ನು ಇಂದು ಆಯೋಜನೆ ಮಾಡಲಾಗಿದ್ದು, ಇದೇ ಸಂದರ್ಭ ಅವಳಿ ಬಾಂಬ್ ಸ್ಫೋಟ (Bomb Blast) ನಡೆದಿದೆ. ಘಟನೆಯ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ಈ ವೇಳೆ ಮೊದಲು ಅನಿಲ ತುಂಬಿದ ಡಬ್ಬಿಯನ್ನು ಎಸೆಯಲಾಯಿತು. ಇದು ಸಿಡಿಯುತಲೇ ಇನ್ನಷ್ಟು ಡಬ್ಬಗಳನ್ನು ನಿರಂತರವಾಗಿ ಎಸೆಯಲಾಯಿತು. ಆಗ ಭಯಾನಕ ಸ್ಪೋಟಗಳು ಸಂಭವಿಸಿದವು ಎಂದು ಇರಾನ್ನ ಮಾಧ್ಯಮಗಳು ವರದಿ ಮಾಡಿವೆ.