ಬೇಲೂರು:- ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಬರುವ ಸಂದರ್ಭದಲ್ಲಿ ಏಕಾಏಕಿ ಕಾಡಾನೆಯೊಂದು ಕಾಫಿ ತೋಟದ ಕೂಲಿ ಕಾರ್ಮಿಕನ್ನು ಸೊಡಲಿನಿಂದ ಅಪ್ಪಳಿಸಿದ ಪರಿಣಾಮವಾಗಿ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದು. ಜೊತೆಗೆ ಇದ್ದ ಇನ್ನೊಬ್ಬ ಕಾಡಾನೆಯಿಂದ ತಪ್ಪಿಸಿಕೊಂಡಿದ್ದಾರೆ.
ಕಾಡಾನೆಯ ದಾಳಿಯ ಬಗ್ಗೆ ಬೆಳೆಗಾರರು ತೀವ್ರ ಆತಂಕದಲ್ಲಿ ಶಾಶ್ವತ ಪರಿಹಾರ ನೀಡುವಂತೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು ! ತಾಲ್ಲೂಕಿನ ಬಿಕ್ಕೋಡು ಹೋಬಳಿ ಮತ್ತಾವರ ಗ್ರಾಮದ ವಸಂತ ಬಿನ್ ಈರಯ್ಯ (೪೮) ಕಾಡಾನೆ ದಾಳಿ ಸಿಕ್ಕಿ ಮೃತ ಪಟ್ಟ ನತದೃಷ್ಟವಾಗಿದ್ದು, ಎಂದಿನಂತೆ ಮತ್ತಾವರ ಗ್ರಾಮದ ವಸಂತ್ ಮತ್ತು ಆತನ ಸ್ನೇಹಿತ ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮಬ್ಬುಗತ್ತಿನಲ್ಲಿ ಸಂಜೆ ಸುಮಾರು ೮ ಗಂಟೆ ವೇಳೆ ಮನೆಗೆ ವಾಪಸು ಬರುತ್ತಿರುವ ವೇಳೆ ಕಾಫಿ ತೋಟದಿಂದ ಏಕಾಏಕಿ ಧಾವಿಸಿದ ಕಾಡಾನೆ ವಸಂತ್ ದಾಳಿ ನಡೆಸಿಲು ಮುಂದಾದ ಸಂದರ್ಭದಲ್ಲಿ ವಸಂತ್ ತಪ್ಪಿಸಿಕೊಳ್ಳುವ ಹೊತ್ತಿಗೆ ಮದವೇರಿದ ಆನೆ ತನ್ನ ಸೊಡಲಿನಿಂದ ಬಲವಾಗಿ ವಸಂತನ ತೊಡೆಯ ಭಾಗಕ್ಕೆ ಅಪ್ಪಳಿಸಿದ್ದು, ವಸಂತ್ ಹೊಡೆತ ತಾಳದೆ ಸ್ಥಳದಲ್ಲಿ ಮೃತ ಪಟ್ಟಿದ್ದಾನೆ ಎನ್ನಲಾಗಿದೆ.
ಇನ್ನೂ ಆತನ ಸ್ನೇಹಿತ ಅಲ್ಲಿಂದ ಓಡಿ ಹೋಗಿ ಹತ್ತಿರದ ಗ್ರಾಮಸ್ಥರನ್ನು ಕರೆದುಕೊಂಡು ಬರುವ ವೇಳೆಗೆ ವಸಂತ್ ಪ್ರಾಣ ಪಕ್ಷಿ ಹಾರಿತ್ತು. ಈ ಘಟನೆಯಿಂದ ಸುತ್ತಲಿನ ಗ್ರಾಮಸ್ಥರು ತೀವ್ರ ಆತಂಕದಲ್ಲಿ ಇಡೀ ರಾತ್ರಿ ನಿದ್ರೆ ಇಲ್ಲದೆ ಕಾಲ ಕಳೆದಿದ್ದಾರೆ. ಸರ್ಕಾರ ನಮಗೆ ಶಾಶ್ವತ ಪರಿಹಾರ ನೀಡಬೇಕು ಇಲ್ಲವಾದರೆ ನಾವೇ ವಲಸೆ ಹೊಗುವ ಎಚ್ಚರಿಕೆಯನ್ನು ನೀಡಿದ್ದಾರೆ.