ಗೌರಿಬಿದನೂರು : ತಾಲ್ಲೂಕಿನ ಅಲ್ಲೀಪುರದಲ್ಲಿ ಸರ್ಕಾರಿ ಶಾಲೆಯ ಮುಂದೆ ಇರುವ ಮುಖ್ಯ ರಸ್ತೆಯಲ್ಲಿ ಸ್ವಾಗತ ಕೋರುತ್ತಿರುವ ಕಸದ ರಾಶಿಗಳು
ಅಲ್ಲೀಪುರ ಮುಖ್ಯ ರಸ್ತೆಯಲ್ಲಿ ಕಸದ ರಾಶಿ ಶೇಖರಣೆ ಯಾಗಿದ್ದು ಇದರಿಂದ ದಿನನಿತ್ಯ ಓಡಾಡುವ ವಾಹನಗಳ ಸಾವರರ ಮೇಲೆ ಪ್ಲಾಸ್ಟಿಕ್ ಸೇರಿದಂತೆ ಕೋಳಿತುಪ್ಪಟ ಸೇರಿದಂತೆ ಇತರೇ ತ್ಯಾಜ್ಯ ಗಾಳಿಯಲ್ಲಿ ತೂರಿ ಬರುತ್ತಿದ್ದು ಸಮಪರ್ಕವಾಗಿ ಕಸ ವಿಲೇವಾರಿ ಮಾಡದ ಗ್ರಾಮ ಪಂಚಾಯಿತಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,
ಇಲ್ಲಿ ಕೆಲಸ ಮಾಡುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸುಂದರವಾಗಿರಬೇಕಾದ ಅಲ್ಲಿಪುರ ಪಟ್ಟಣವು ದುರ್ವಾಸನೆ ಇಂದ ಸ್ವಾಗತಿಸುತ್ತಿದೆ ಕೂಡಲೇ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಕಸ ವಿಲೇವಾರಿ ಮಾಡುವಂತೆ ಸೂಚಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ,