ಕೊಪ್ಪಳ:- ಬಿಕೆ ಹರಿಪ್ರಸಾದ್ ರನ್ನು ತನಿಖಾ ಸಂಸ್ಥೆಗಳ ವಶಕ್ಕೆ ನೀಡಿ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಗೋಧ್ರಾ ಘಟನೆ ಪುನರಾರ್ವತನೆ ಹೇಳಿಕೆ ನೀಡಿರುವ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳು ವಶಕ್ಕೆ ಪಡೆದು ತನಿಖೆ ಮಾಡಬೇಕು. ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದರು.
500 ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗಿದ್ದು, ಜ.22ರಂದು ಉದ್ಘಾಟನೆ ನಡೆಯಲಿದೆ. ರಾಮಮಂದಿರಕ್ಕೆ ಕಳಂಕ ತರುವುದಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ಸತ್ಯಾಸತ್ಯತೆ ತಿಳಿಯಲು ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದರು.
ಕ್ಷುಲ್ಲಕ ರಾಜಕಾರಣ, ರಾಜಕಾರಣದ ಪ್ರತಿಷ್ಠೆಗಾಗಿ ಈ ರೀತಿಯಾಗಿ ಮಾತನಾಡಿರುವುದು ನಾಚಿಕೆಗೇಡಿತನ. ಹರಿಪ್ರಸಾದ್ ಹೇಳಿಕೆಯ ಕುತಂತ್ರದ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಕೂಡಲೇ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಕಾಲದಲ್ಲಿ ಜಾತಿಗಳನ್ನು ಒಡೆಯಲಾಗಿದ್ದು, ಪ್ರಧಾನಿ ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್ನವರಿಗೆ ನೈತಿಕ ಹಕ್ಕಿಲ್ಲ. 31 ವರ್ಷದ ಬಳಿಕ ಕರಸೇವಕರನ್ನು ಬಂಧಿಸುವ ಕೆಲಸ ಮಾಡುತ್ತಿದೆ. ಇದೆಲ್ಲ ದ್ವೇಷ ರಾಜಕಾರಣ. ಇದೊಂದು ಸರ್ಕಾರವಾ? ಎಂದ ಅವರು, ಮೋದಿ ಹಾಗೂ ರಾಹುಲ್ ನಡುವೆ ಆಕಾಶ-ಭೂಮಿಯಷ್ಟು ವ್ಯತ್ಯಾಸವಿದೆ. ರಾಮನನ್ನು, ಹನುಮಂತನನ್ನು ಕಾಲ್ಪನಿಕ ವ್ಯಕ್ತಿಗಳು ಎಂದಿದ್ದು ಕಾಂಗ್ರೆಸ್ ಎಂದರು.