ಬೆಂಗಳೂರು: ಹಾಡಹಗಲೇ ಗೃಹಿಣಿಯೋರ್ವಳನ್ನ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್ ವ್ಯಾಲಿ ಖ್ಯಾತಿಯ ಎಲೆಕ್ಟ್ರಾನಿಕ್ ಸಿಟಿಯ ಮಗ್ಗಲಿನಲ್ಲಿಯೇ ನಡೆದಿದೆ. ಇದು ಐಟಿಬಿಟಿ (ITBT) ಸಿಟಿಯ ಜನರನ್ನ ಬೆಚ್ಚಿ ಬೀಳಿಸಿದೆ.
ಖಂಡಿತ, ನಾನೂ ಕಾಟೇರ ಸಿನಿಮಾ ನೋಡ್ತಿನಿ, ಸದ್ಯಕ್ಕೆ ನಾನು ಶೂಟಿಂಗ್ನಲ್ಲಿದ್ದೇನೆ: ನಟ ಸುದೀಪ್!
ಮೃತ ಮಹಿಳೆಯನ್ನು ನೀಲಂ(30) ಎಂದು ಗುರುತಿಸಲಾಗಿದೆ. ಮೂಲತಃ ಉತ್ತರ ಪ್ರದೇಶದವರಾಗಿರುವ ಈಕೆ ತನ್ನ ಕುಟುಂಬದ ಜೊತೆ ಕಳೆದ ಕೆಲ ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆಟ್ಟದಾಸನಪುರದ ಸಾಯಿ ಶಕ್ತಿ ಬಡಾವಣೆಯ ಗಂಗಾ ಬ್ಲಾಕ್ ನ ಬಾಡಿಗೆ ಮನೆಯಲ್ಲಿ ವಾಸವಿದ್ರು. ಪತಿ ಹಾರ್ಡ್ ವೇರ್ ಶಾಪ್ ಜೊತೆಗೆ ಪೈಂಟಿಂಗ್ ಕಾಂಟ್ರಾಕ್ಟ್ ಕೆಲಸ ಮಾಡಿಕೊಂಡಿದ್ದ. ಎಂದಿನಂತೆ ಮಕ್ಕಳು ಶಾಲೆಗೆ ಹೋಗಿದ್ರೆ, ಪತಿ ಕೆಲಸಕ್ಕೆ ಹೋಗಿದ್ದ ಎನ್ನಲಾಗಿದೆ.
ಮನೆಯಲ್ಲಿ ಮಹಿಳೆ ನೀಲಂ ಮಾತ್ರ ಒಬ್ಬಂಟಿಯಾಗಿದ್ದಾಗ ಯಾರೋ ಅಪರಿಚಿತರು ಮನೆಗೆ ನುಗ್ಗಿ ಮಹಿಳೆಯ ಹತ್ಯೆ ಮಾಡಿದ್ದಾರೆ. ಆದರೆ ದುಷ್ಕರ್ಮಿಗಳು ಯಾವುದೇ ಒಡವೆ, ಹಣವನ್ನು ಕದ್ದಿಲ್ಲ. ಹೀಗಾಗಿ ಈ ಕೊಲೆಯ ಹಿಂದೆ ಅನುಮಾನಗಳು ಹುಟ್ಟಿಕೊಂಡಿವೆ.