ಆಸ್ಟ್ರೀಯಾ: 42 ವರ್ಷದ ವ್ಯಕ್ತಿಯೊಬ್ಬರು ಈ ಸ್ಟೇರ್ವೇ ಟು ಹೆವನ್ ಹತ್ತಲು ಬಂದಿದ್ದರು. ಹೀಗೆ ಇದನ್ನು ಹತ್ತುವ ವೇಳೆ 90 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮೆಟ್ರೋ ನ್ಯೂಸ್ ವರದಿ ಮಾಡಿದೆ. ಇದೇನು ಸ್ವರ್ಗದ ಮೆಟ್ಟಿಲು ಸಾಯುವ ಮೊದಲೇ ಸ್ವರ್ಗನಾ ಎಂದೆಲ್ಲಾ ಯೋಚನೆ ಮಾಡ್ತಿದ್ದೀರಾ? ಇದು ಆಸ್ಟ್ರೀಯಾದ ಪ್ರವಾಸಿ ತಾಣ ಇಲ್ಲಿ ಭಾರಿ ಎತ್ತರದ ಬಂಡೆಗೆ ಕಬ್ಬಿಣದ ಮೆಟ್ಟಿಲುಗಳನ್ನು ಅಳವಡಿಸಲಾಗಿದ್ದು,
ಇದಕ್ಕೆ ಸ್ಟೇರ್ವೇ ಟು ಹೆವೆನ್ ಎಂದು ಹೆಸರಿಡಲಾಗಿದೆ. ಜಗತ್ತಿನಾದ್ಯಂತ ಇರುವ ಪ್ರವಾಸಿಗರ ಸೆಳೆಯುವ ಈ ಆಸ್ಟ್ರೀಯಾದ ಸ್ಟೇರ್ವೇ ಟು ಹೆವೆನ್ಗೆ ಜಗತ್ತಿನ್ನೆಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈ ತಾಣದ ಸಾಕಷ್ಟು ವೀಡಿಯೋಗಳು ಹರಿದಾಡುತ್ತಿದ್ದು, ಸ್ಟೇರ್ವೇ ಟು ಹೆವೆನ್ ಎಂದೇ ಫೇಮಸ್ ಆಗಿದೆ. ಕಡಿದಾದ ಹಾಗೂ ಭಾರಿ ಎತ್ತರವಿರುವ ಬೆಟ್ಟಕ್ಕೆ ಅಳವಡಿಸಿದ ಏಣಿಯನ್ನು ಹತ್ತುವ ವೇಳೆ ಈತ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.
India’s richest person: ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ
ಈತ ಕೆಳಗೆ ಬಿದ್ದ ಕೂಡಲೇ ಅಲ್ಲಿನ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿತ್ತು, ಕೂಡಲೇ ಆತನ ರಕ್ಷಣೆಗಾಗಿ ಹೆಲಿಕಾಪ್ಟರ್ (helicopters) ತಂದು ಕಾರ್ಯಚರಣೆ ನಡೆಸಲಾಗಿತ್ತು. ಆದರೂ ಆತನನ್ನು ಬದುಕಿಸಿಕೊಳ್ಳಲಾಗಲಿಲ್ಲ ಆತನ ಶವವನ್ನು ಕಣಿವೆಯಿಂದ ಮೇಲೆತ್ತಲಾಯ್ತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಪ್ರಕರಣದಲ್ಲಿ ಯಾವುದೇ ಮೂರನೇ ವ್ಯಕ್ತಿಯ ನಿರ್ಲಕ್ಷ್ಯವನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಏಕೆಂದರೆ ಘಟನೆ ನಡೆಯುವ ವೇಳೆ ಅವರೊಬ್ಬರೇ ಇದ್ದರೂ ಅವರು ಸಂಪೂರ್ಣ ಒಬ್ಬಂಟಿಯಾಗಿದ್ದರು ಎಂದು ತಿಳಿಸಿದ್ದಾರೆ.