ಬಿಗ್ಬಾಸ್ ಮನೆಯಲ್ಲಿ (Bigg Boss House) ದಿನದಿಂದ ದಿನಕ್ಕೆ ಸ್ಪರ್ಧೆ ಕಠಿಣವಾಗುತ್ತಿದೆ. ಟಾಸ್ಕ್ಗಳ ಸ್ವರೂಪ ಬದಲಾಗುತ್ತಿದೆ. ಹಾಗೆಯೇ ಸ್ಪರ್ಧಿಗಳ ಮನಸ್ಥಿತಿ ಮನೆಯ ಪರಿಸ್ಥಿತಿಯೂ ಬದಲಾಗುತ್ತಿದೆ. ಈ ವಾರದ ಅಂತ್ಯ ಸಮೀಪಿಸುತ್ತಿದ್ದಂತೆಯೇ ಮತ್ತೆ ಕ್ಯಾಪ್ಟನ್ಸಿಗಾಗಿ ಜಿದ್ದಾಜಿದ್ದಿ ಶುರುವಾಗಿದೆ. ಕ್ಯಾಪ್ಟನ್ ಆಗಿರೋ ತನಿಷಾ ವಿರುದ್ಧ ತುಕಾಲಿ ಸಂತೂ, ಕಾರ್ತಿಕ್ ತಿರುಗಿ ಬಿದ್ದಿದ್ದಾರೆ
ಬಿಗ್ ಬಾಸ್ ಮನೆಯ ಸದಸ್ಯರಲ್ಲಿ ಯಾರು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇರಬೇಕು ಎಂದು ಮನೆಯ ಸದಸ್ಯರು ನಿರ್ಧರಿಸಬೇಕು ಎಂದು ಹೇಳಿದ್ದಾರೆ. ನಮ್ರತಾ ಅವರು, ವರ್ತೂರು ಸಂತೋಷ್ ಅವರನ್ನು ನಾಮಿನೇಟ್ ಮಾಡಿದರು. ತನಿಷಾ, ಮೈಕಲ್ ಹೆಸರು ಹೇಳಿದರು. ಮೈಕಲ್ ಮತ್ತು ತುಕಾಲಿ ಸಂತೋಷ್ ಅವರು ತನಿಷಾ ಕುಪ್ಪಂಡ ಅವರ ಹೆಸರು ಹೇಳಿದರು.
ಅದಕ್ಕಿಂತ ಹೆಚ್ಚಾಗಿ, ಕಾರ್ತೀಕ್ (Karthik Mahesh) ಅವರು ಕ್ಯಾಪ್ಟನ್ ಆಗಿ ಕೆಲವು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಎಡವಿದರು ಎಂದು ತನಿಷಾ (Tanisha Kuppanda) ಬಗ್ಗೆ ಹೇಳಿದ್ದಾರೆ. ಇದನ್ನು ಕೇಳಿ ತನಿಷಾ ಕೂಡ ಗರಂ ಆಗಿದ್ದಾರೆ. ಒಟ್ಟಾರೆ ಕ್ಯಾಪ್ಟನ್ಸಿ ಓಟದಿಂದ ಈ ವಾರ ಹೊರಗೆ ಬೀಳುವವರು ಯಾರು? ಯಾರು ಉಳಿದುಕೊಳ್ಳುತ್ತಾರೆ? ಕೊನೆಗೆ ಯಾರು ಕ್ಯಾಪ್ಟನ್ ಆಗುತ್ತಾರೆ ಎಂಬುದನ್ನು ಕಾದುನೋಡಬೇಕಷ್ಟೆ.