ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಂಡುಬಂದರೆ ಕಿಡ್ನಿ ಫೇಲ್ಯೂರ್ ಆಗುವುದು ಖಂಡಿತ ಎಂದು ನೂತನ ಸಂಶೋಧನೆ ಬಹಿರಂಗಪಡಿಸಿದೆ.
ದೇಹದ ಪ್ರಮುಖ ಅಂಗವಾದ ಮೂತ್ರಪಿಂಡವು ತನ್ನ ಕೆಲಸ ಮಾಡಲು ವಿಫಲವಾದರೆ ಜೀವಕ್ಕೆ ಅಪಾಯ. ಇಂದು ಅನೇಕರಲ್ಲಿ ಈ ಸಮಸ್ಯೆ ಕಾಡುತ್ತಿರುವುದು ತುಂಬಾ ವಿಷಾದನೀಯವಾಗಿದೆ.
ಕಿಡ್ನಿ ವಿಫಲವಾದಾಗ ದೇಹವು ಸರಿಯಾಗಿ ಕೆಲಸ ಮಾಡುವುದಿಲ್ಲ, ತುಂಬಾ ದುರ್ಬಲವಾಗುತ್ತದೆ. ದೇಹದ ವಿವಿಧ ಭಾಗಗಳಲ್ಲಿ ಕೆಂಪು ಬಣ್ಣದ ದದ್ದುಗಳು ಕಾಣಿಸಿಕೊಳ್ಳಬಹುದು. ಇವು ವಿಪರೀತ ತುರಿಕೆ ಉಂಟುಮಾಡುತ್ತವೆ. ಚರ್ಮವು ತುಂಬಾ ಡ್ರೈ ಮತ್ತು ಒರಟಾಗಲು ಪ್ರಾರಂಭಿಸುತ್ತದೆ. ಪದೇ ಪದೇ ಅತಿಯಾಗಿ ಮೂತ್ರ ವಿಸರ್ಜನೆಯಾಗುವುದು ಕೂಡ ಕಿಡ್ನಿ ವೈಫಲ್ಯದ ಸಂಕೇತ. ಜೊತೆಗೆ ಮೂತ್ರ ವಿಸರ್ಜಿಸುವಾಗ ಉರಿ ಇರುತ್ತದೆ. ದೇಹದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಮುಖದಲ್ಲಿ ಕೂಡ ಊತ ಕಂಡುಬರುತ್ತದೆ. ಕಿಡ್ನಿ ಫೇಲ್ ಆಗಿದ್ದರೆ ನಮಗೆ ಹಸಿವಾಗುವುದಿಲ್ಲ. ವಾಂತಿ ಅಥವಾ ವಾಕರಿಕೆ ಬಂದಂತೆ ಅನಿಸುತ್ತದೆಯಾಗಿದೆ.
ಹೀಗಾಗಿ ಈ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಭೇಟಿ ಆಗುವುದು ಉತ್ತಮ.