ಬೆಂಗಳೂರು : ಮಕ್ಕಳಿಗೆ ವಿದ್ಯೆ ಕಲಿಯೋಕೆ ಕಷ್ಟ.. ಹೆತ್ತವರಿಗೆ ಮಕ್ಕಳು ಚನ್ನಾಗಿ ಓದಬೇಕು ಅನ್ನೋ ಇಷ್ಟ.. ಮನೆಯಲ್ಲಿ ಚನ್ನಾಗಿ ಓದಿಕೋ ಅಂದಿದ್ದೇ ತಪ್ಪಾಗಿಹೋಗಿತ್ತು.. ಅಮ್ಮಾ ಕರೆ ಮಾಡಿ ಕಾಲೇಜ್ ಗೆ ಹೋಗಲ್ಲ.. ತಪ್ಪು ಮಾಡಲ್ಲ.. ಸಾರಿ ಎಂದು ಹೇಳಿದನು ಆತ್ಮಹತ್ಯೆಯ ದಾರಿ ಹಿಡಿದುಬಿಟ್ಟ..
ಇವನ ಹೆಸರು ವಿಶು ಉತ್ತಪ್ಪ.. ವಯಸ್ಸು ಕೇವಲ 19 ವರ್ಷ.. ಮೂಲತಃ ಕೊಡಗು ಜಿಲ್ಲೆಯವನು.. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಇ ವ್ಯಾಸಂಗ ಮಾಡ್ತಿದ್ದ.. ಹೆತ್ತವರ ಜೊತೆ ನೆಮ್ಮದಿಯಾಗಿದ್ದವನಿಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗಿತ್ತು. ಇದರಿಂದಾಗಿ ತಾಯಿ ಮಗನಿಗೆ ಓದುವಂತೆ ಬುದ್ದಿ ಹೇಳಿದ್ದರು.. ಅಷ್ಟೇ ಆತನ ಮನಸ್ಸಿನಲ್ಲಿ ಅದ್ಯಾವ ವಿಚಾರ ಕಾಡಿತ್ತೋ ನಿನ್ನೆ ಡಬಲ್ ಬ್ಯಾರಲ್ ಗನ್ ನಲ್ಲಿ ಹೃದಯದ ಸ್ವಲ್ಪ ಮೇಲ್ಭಾಗಕ್ಕೆ ಶೂಟ್ ಮಾಡಿಕೊಂಡಿದ್ದಾನೆ..
ವಿಶು ಉತ್ತಪ್ಪ ಮನೆಯಲ್ಲೇ ಮಲಗಿಕೊಂಡಿದ್ದ..ಈತನ ತಂದೆ ರವಿ ತಮ್ಮಯ್ಯ ಮತ್ತು ತಾಯಿ ಹೊರಗೆ ಹೋಗೋಣ ಬಾ ಎಂದು ಕರೆದಿದ್ದಾರೆ. ಆದರೆ ವಿಶು ತಾನು ಬರೋದಿಲ್ಲ ಎಂದು ಹೇಳಿದ್ದಾನೆ. ಆ ಬಳಿಕ ತಂದೆ ತಾಯಿ ಮನೆಗೆ ಬೇಕಾದ ಸಾಮಗ್ರಿ ತರಲು ಹೋಗಿದ್ದಾರೆ..ಈ ವೇಳೆ ತಾಯಿಗೆ ಕರೆ ಮಾಡಿದ್ದ ವಿಶು ಉತ್ತಪ್ಪ ಅಮ್ಮ ಸಾರಿ, ನಾನು ಕಾಲೇಜಿಗೂ ಹೋಗಲ್ಲ , ತಪ್ಪು ಮಾಡೋಲ್ಲ ಸಾರಿ ಎಂದಿದ್ದಾನೆ.. ಆ ಬಳಿಕವೇ ತಾನು ಗುಂಡು ಹಾರಿಕೊಂಡಿದ್ದು ಮನೆಗೆ ವಾಪಸ್ಸಾದ ತಂದೆ ಬಾಗಿಲು ಬಡಿದಿದ್ದಾರೆ ಈ ವೇಳೆ ತೀವ್ರ ರಕ್ತ ಸ್ರಾವವಾಗಿದ್ದ ವಿಶು ಉತ್ತಪ್ಪನೇ ಬಾಗಿಲು ತೆರೆದಿದ್ದಾನೆ.
ವಿಶು ಉತ್ತಪ್ಪ ತಂದೆ ರವಿ ತಮ್ಮಯ್ಯ ಮೂಲತಃ ಕೊಡಗಿನವರಾಗಿದ್ರಿಂದ ಡಬಲ್ ಬ್ಯಾರೇಲ್ ಗನ್ ಗೆ ಲೈಸನ್ಸ್ ಪಡೆದಿದ್ರು.ಕೆಲವು ಗನ್ ಮ್ಯಾನ್ ಆಗಿದ್ದು ಸದ್ಯ ನೈಸ್ ಕಂಪನಿಯಲ್ಲಿ ಸೆಕ್ಯೂರಿಟಿಯಾಗಿದ್ದಾರೆ. ಇನ್ನು ವಿಶು ಉತ್ತಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ ಆದರು ಪ್ರೀತಿ ಪ್ರೇಮದಿಂದ ಆತ್ಮಹತ್ಯೆಯನ್ನು ಮಾಡಿಕೊಂಡನ ಎಂಬ ಅನುಮಾನ ಮೂಡಿದ್ದು ಮೊಬೈಲ್ ನಲ್ಲಿ ಸತ್ಯಾಂಶ ಅಡಗಿರುವ ಸಾಧ್ಯತೆಗಳಿವೆ. ಇನ್ನು ವಿಶು ಉತ್ತಪ್ಪನ ಸ್ನೇಹಿತ ಆತ ಆತ್ಮಹತ್ಯೆ ಮಾಡುಕೊಳ್ಳುವಷ್ಟು ವೀಕ್ ಇರ್ಲಿಲ್ಲ.. ತಾನು ಫೋನ್ ಮಾಡಿದಾಗ ಹುಷಾರಿಲ್ಲ ಎಂದು ತಿಳಿಸಿದ್ದ ಎಂದಿದ್ದಾನೆ.
ಸದ್ಯ ಮಾದನಾಯಕನಹಳ್ಳಿ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕಿ ಮೃತನ ಮನೆ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರೋದ್ರಿಂದ ಕೇಸ್ ವರ್ಗಾಯಿಸಿದ್ದಾರೆ. ಅದೇನಾದ್ರು ವಯಸ್ಸಿಗೆ ಬಂದ ಮಕ್ಕಳು ಆತ್ಮಹತ್ಯೆಯ ದಾರಿ ಹಿಡಿದು ಹೆತ್ತವರನ್ನು ಜೀವನಪರ್ಯಂತ ನರಳುವಂತೆ ಮಾಡುತ್ತಿರೋದು ದುರಂತವೇ ಸರಿ.