ಬೆಂಗಳೂರು :- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಾದ್ಯಂತ ಚಳಿಗಾಲ ಆರಂಭವಾಗಿದ್ದು ನಗರದಲ್ಲಿ ಹಾವುಗಳ ಕಾಟ ಜೋರಾಗಿದೆ.
ಇತ್ತೀಚೆಗೆ ಮನೆಯ ಸಂಧಿ ಗೊಂದಿಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಹಾವುಗಳನ್ನ ಹಿಡಿಯೋದಕ್ಕೆ ವನ್ಯ ಸಂರಕ್ಷಣಾ ತಂಡಕ್ಕೆ ಪ್ರತಿದಿನ 50ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಹೆಲ್ಮೆಟ್, ಕಾಂಪೌಂಡ್, ಶೂಸ್, ವಾಟಾರ್ ಟ್ಯಾಂಕರ್, ಫುಟ್ ಪಾತ್, ಕಾರಿನ ಸಂಧಿಗೊಂದಿಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಮನೆಯಿಂದ ಹೊರಗೆ ಹೋಗುವ ಜನರು ಒಮ್ಮೆ ಹುಷಾರಾಗಿ ಎಲ್ಲಾವನ್ನ ಚೆಕ್ ಮಾಡಿ ಮನೆಯಿಂದ ಹೊರಹೋಗುವ ಪರಿಸ್ಥಿತಿ ಎದುರಾಗಿದೆ. ಇನ್ನು ನಗರದ ಯಲಹಂಕ, ಆರ್ಆರ್ ನಗರ, ಆರ್ಟಿ ನಗರ, ನಾಗರಭಾವಿ, ಮಹದೇವಪುರ ಭಾಗದಲ್ಲಿ ಪ್ರತಿನಿತ್ಯ ಹಾವಿನ ದರ್ಶನವಾಗುತ್ತಿದ್ದು, ಹಾವುಗಳಿಂದಾಗಿ ಜನರು ಪ್ರತಿದಿನ
ರೋಸಿ ಹೋಗುತ್ತಿದ್ದಾರೆ. ಇನ್ನು ಹಾವುಗಳು ಬಂದಾಗ ಬಿಬಿಎಂಪಿ ವನ್ಯಸಂಸಕ್ಷಕರು ಸಹ ಸರಿಯಾದ ಸಮಯಕ್ಕೆ ಸಿಗದೇ ಇರುವುದು ಹಾಗೂ ಕರೆಗಳನ್ನ ಸ್ವೀಕರಿಸದೇ ಇರೋದ್ರಿಂದ ಜನರು ಬಿಬಿಎಂಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ವನ್ಯ ಸಂರಕ್ಷಕರನ್ನ ಪ್ರಶ್ನಿಸಿದ್ದಕ್ಕೆ ಜನರ ಬೇಡಿಕೆಗೆ ತಕ್ಕಷ್ಟು ವನ್ಯ ಸಂರಕ್ಷಕರಿಲ್ಲ. ಸಧ್ಯ ಬೆಂಗಳೂರು ವ್ಯಾಪ್ತಿಯಲ್ಲಿ 7 ಜನರಷ್ಟೇ ಹಾವುಗಳನ್ನ ಹಿಡಿಯುವ ವನ್ಯ ಸಂರಕ್ಷಕರಿದ್ದಾರೆ. ಈ ಹಿಂದೆ ದಿನಕ್ಕೆ 5 ರಿಂದ 15 ಕಾಲ್ ಗಳು ಬರುತ್ತಿದ್ವು. ಇದೀಗಾ 40 ರಿಂದ 50 ಕರೆಗಳು ಬರುತ್ತಿವೆ. ಈ 8 ಝೋನ್ ಗಳಲ್ಲಿ 7 ಜನ ವನ್ಯ ಸಂರಕ್ಷಕರಿಂದ ಎಲ್ಲಾ ಕರೆಗಳನ್ನ ಸ್ವೀಕರಿಸುವುದಕ್ಕೆ ಸಾಧ್ಯ ಆಗ್ತಿಲ್ಲ. ಆದರೂ ಹೆಚ್ಚುವರಿಯಾಗಿ ವನ್ಯ ಸಂರಕ್ಷಕರನ್ನ ಬಿಬಿಎಂಪಿ ನೇಮಕ ಮಾಡಿಕೊಳ್ಳುತ್ತಿಲ್ಲ ಎಂದು ವನ್ಯ ಸಂರಕ್ಷಕರೊಬ್ಬರು ತಿಳಿಸಿದರು.