‘ಕಾಟೇರ’ ಸಿನಿಮಾ ಮೊದಲ ದಿನ 19.79 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಶನಿವಾರ (ಡಿ.30) 17.35 ಕೋಟಿ ರೂಪಾಯಿ ಬಾಚಿಕೊಂಡಿತು. ಭಾನುವಾರ (ಡಿ.31) ಬರೋಬ್ಬರಿ 20.94 ಕೋಟಿ ರೂಪಾಯಿ ಆದಾಯ ಹರಿದುಬಂತು. ಸೋಮವಾರ (ಜ.1) 18.26 ಕೋಟಿ ರೂಪಾಯಿ ಮತ್ತು ಮಂಗಳವಾರ (ಜ.2) 9.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಬುಧವಾರ 9.78 ಕೋಟಿ ರೂಪಾಯಿ ಗಳಿಕೆ ಆಗಿದೆ. ಒಟ್ಟು ಕಲೆಕ್ಷನ್ 95.36 ಕೋಟಿ ರೂ. ಆಗಿದ್ದು, ಶೀಘ್ರದಲ್ಲೇ 100 ಕೋಟಿ ರೂಪಾಯಿ ಗಡಿ ಮುಟ್ಟಲಿದೆ.
‘ಕಾಟೇರ’ ಅಪ್ಪಟ ಕನ್ನಡದ ಸಿನಿಮಾ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದು ಬಿಡುಗಡೆ ಆಗಿಲ್ಲ. 6 ದಿನಕ್ಕೆ ಕೇವಲ ಕರ್ನಾಟದಲ್ಲೇ ಈ ಪರಿ ಕಲೆಕ್ಷನ್ ಮಾಡಿದ ಕಾರಣಕ್ಕಾಗಿ ದರ್ಶನ್ ಅವರು ದಾಖಲೆ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬದನ್ನು ಕಾದುನೋಡಬೇಕು. ಬುಧವಾರ (ಜ.3) ಬೆಂಗಳೂರಿನಲ್ಲಿ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್ಲೈನ್ ವೆಂಕಟೇಶ್ ಮೆಟ್ಟಿಲ ಮೇಲೆ ಕುಳಿತು ಕಾಟೇರ ಸಿನಿಮಾ ವೀಕ್ಷಿಸಿದ್ದಾರೆ. ದರ್ಶನ್ ಅವರಿಂದ ಸ್ಫೂರ್ತಿ ಪಡೆದು ನಟನೆಗೆ ಬಂದಿರುವ ಧನ್ವೀರ್ ಕೂಡ ಆಗಮಿಸಿದ್ದರು. ನಟ ವಿನೋದ್ ಪ್ರಭಾಕರ್, ನಿರ್ದೇಶಕ ಯೋಗರಾಜ್ ಭಟ್, ನಟಿ ಮೇಘಾ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ, ಶ್ರುತಿ ಮೊದಲಾದ ಸೆಲೆಬ್ರಿಟಿಗಳು ಈ ಶೋ ವೀಕ್ಷಣೆಗೆ ಆಗಮಿಸಿದ್ದರು.
ಬಂದ ಎಲ್ಲಾ ಕಲಾವಿದರನ್ನು ದರ್ಶನ್ ಪ್ರೀತಿಯಿಂದ ಸ್ವಾಗತಿಸಿದರು. ಆ ಬಳಿಕ ದರ್ಶನ್ ಅವರು ಥಿಯೇಟರ್ ಒಳಗೆ ತೆರಳಿದರು. ದರ್ಶನ್, ರಾಕ್ಲೈನ್ ವೆಂಕಟೇಶ್ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಈ ಫೋಟೋ ಫ್ಯಾನ್ಸ್ ವಲಯದಲ್ಲಿ ಹರಿದಾಡಿದೆ. ದರ್ಶನ್ ಯಾವಾಗಲೂ ಸಿಂಪಲ್ ಆಗಿ ಇರೋಕೆ ಇಷ್ಟ ಪಡುತ್ತಾರೆ. ಇದಕ್ಕೆ ಈ ಫೋಟೋ ಉತ್ತಮ ಉದಾಹರಣೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.