ಬೆಂಗಳೂರು: ಕೋಟಿ ಮೌಲ್ಯದ ಬ್ರಾಂಡೆಡ್ ಶೂಗಳು. ಅವುಗಳನ್ನು ತುಂಬಿದ್ದ ಈಚರ್ ವಾಹನ ಸಮೇತ ಸಿನಿಮಾ ಸ್ಟೈಲ್ನಲ್ಲಿ ಕಳ್ಳತನ ಮಾಡಲಾಗಿತ್ತು. ಸಣ್ಣ ಸುಳಿವು ನೀಡದೇ ಕಾಸ್ಲ್ಟಿ ಶೂಗಳನ್ನು ಕದ್ದಿದ್ದ ಖದೀಮರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಸುಭಾನ್ ಪಾಷಾ, ಮನ್ಸರ್ ಅಲಿ ಮತ್ತು ಶಹಿದ್ದುಲ್ ರೆಹಮಾನ್ ಬಂಧಿತರು. ಇದೀಗ ಇವರು ಬ್ರಾಂಡೆಡ್ ನೈಕಿ ಶೂಗಳನ್ನು ಕದ್ದು ಜೈಲು ಪಾಲಾಗಿದ್ದಾರೆ. ಕಳೆದ ತಿಂಗಳು 21 ರಂದು ಬೆಂಗಳೂರು ಹೊರವಲಯ ಆನೇಕಲ್ ಸಮೀಪದ ಶೆಟ್ಟಿಹಳ್ಳಿ ಬಳಿಯ ನೈಕಿ ಗೋದಾಮಿನಿಂದ ಹೊಸಕೋಟೆ ಬಳಿಯ ಮಿಂತ್ರ ಗೋದಾಮಿಗೆ ಹೊರಟಿದ್ದ ಶೂ ಹೊತ್ತ ಈಚರ್ ವಾಹನ ಕಾಣೆಯಾಗಿತ್ತು. ಸುಮಾರು ಒಂದು ಕೋಟಿ ಹತ್ತು ಲಕ್ಷ ಮೌಲ್ಯದ 1,558 ಜೊತೆ ಶೂ ಸಹಿತ ಈಚರ್ ವಾಹನ ಕಳುವಾದ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Women’s Conference: ಜ. 6 ಮತ್ತು 7 ರಂದು ರಾಜ್ಯ ಮಟ್ಟದ ಮಹಿಳಾ ಸಮಾವೇಶ: ಕೇಂದ್ರ ಸಚಿವರಿಂದ ಉದ್ಗಾಟನೆ!