ಹುಬ್ಬಳ್ಳಿ: ಕುಕ್ಕರ್ ಬಾಂಬ್ ಸ್ಫೋಟಿಸಿದ ಭಯೋತ್ಪಾದಕರನ್ನು ಕಾಂಗ್ರೆಸ್ ನಾಯಕರು ಬ್ರದರ್ಸ್ ಎಂದು ಹೇಳುತ್ತಾರೆ, ರಾಮಭಕ್ತರನ್ನು ಅಪರಾಧಿ ಎನ್ನುತ್ತಾರೆ. ಆದರೆ ನೂರು ಸಿದ್ದರಾಮಯ್ಯ ಬಂದರೂ ರಾಮಭಕ್ತರು ಎದುರಿಸಲು ಸಿದ್ಧ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸವಾಲೆಸೆದರು. ಅವರು ಮಾತನಾಡಿದರು. ಪೊಲೀಸರ ಮೇಲೆ ಹಲ್ಲೆ ಮಾಡಿದವರನ್ನು ಮುಟ್ಟುವುದಿಲ್ಲ.
Stomach Pain: ತಿಂದ ಕೂಡಲೇ ಹೊಟ್ಟೆ ನೋವಾಗುತ್ತ.? ಹಾಗಾದ್ರೆ ಈ ಮನೆ ಮದ್ದು ಟ್ರೈ ಮಾಡಿ
ಆದರೆ ಪ್ರತಿ ದಿನ ಆಟೋರಿಕ್ಷಾ ಓಡಿಸುವ ಅಮಾಯಕನನ್ನು ತಲೆಮರೆಸಿಕೊಂಡಿದ್ದಾನೆಂದು ಬಂಧಿಸಿದ್ದಾರೆ. ಜೈ ಶ್ರೀರಾಮ್ ಎಂದರೆ ಜೈಲಿಗೆ ಹಾಕುತ್ತಾರೆ, ಜೈ ಟಿಪ್ಪು ಎಂದರೆ ಬಿಡುಗಡೆಗೊಳಿಸುತ್ತಾರೆ. ರಾಮಭಕ್ತರನ್ನು ವಿರೋಧಿಸಿದರೆ ಹಾಗೂ ಟಿಪ್ಪು ಸಂಸ್ಕೃತಿಯನ್ನು ವಿಜೃಂಭಿಸಿದರೆ ಕಾಂಗ್ರೆಸ್ ಸರ್ಕಾರ ಬಹಳ ಕಾಲ ಉಳಿಯುವುದಿಲ್ಲ. ಟಿಪ್ಪುವಿನ ಹಿಂದೆ ಹೋದವರ ಮನೆಗಳು ಸುಟ್ಟಂತೆಯೇ ಕಾಂಗ್ರೆಸ್ ಮನೆಯೂ ಸುಡಲಿದೆ ಎಂದು ಎಚ್ಚರಿಕೆ ನೀಡಿದರು.