ಬೆಂಗಳೂರು: ನಮ್ಮ ಮೆಟ್ರೋ ವಿಚಾರ ಸಂಬಂಧಿಸಿದಂತೆ ಇಂದು ನಗರದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಸುದ್ದಿಗೋಷ್ಠಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ನಮ್ಮ ಮೆಟ್ರೋಗೆ ಪೂರ್ಣಾವಧಿ ಎಂಡಿಯಿಲ್ಲ ನಿನ್ನೆ ಕೇಂದ್ರ ಹರ್ದೀಪ್ ಸಿಂಗ್ ಪುರಿ ಭೇಟಿ ಮಾಡಿದ್ದ ತೇಜಸ್ವಿ ಸೂರ್ಯ ಎಂಡಿ ವಿಚಾರದಲ್ಲಿ ಮಧ್ಯಸ್ಥಿಕೆಗೆ ಮನವಿ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಅಂದರೆ ಮೆಟ್ರೋ ಬಳಕೆ ಮಾಡಬೇಕು ಬೆಂಗಳೂರು ಬೆಳೆಯುವ ವೇಗಕ್ಕೆ ಮೆಟ್ರೋ ಜಾಲ ವಿಸ್ತರಣೆಯಾಗಿಲ್ಲ ಈ ಸರ್ಕಾರ ಅಧಿಕಾರ ಬಂದು 7 ತಿಂಗಳಾದ್ರು ಮೆಟ್ರೋಗೆ ಪೂರ್ಣವಾಧಿ ಎಂಡಿ ನೇಮಕವಾಗಿಲ್ಲ ಬೆಂಗಳೂರು ಮೆಟ್ರೋ ಕಾಮಗಾರಿ ತಡವಾಗಿ ಆಗ್ತಾ ಇದ್ದಾವೆ ಅವರು ಹೇಳಿದ ಡೆಡ್ ಲೈನ್ ಗೆ ಮೆಟ್ರೋ ಕಾಮಗಾರಿ ಪೂರ್ಣವಾಗ್ತಾಯಿಲ್ಲ ಈ ಎಲ್ಲದಕ್ಕೂ ಪ್ರಮುಖ ಕಾರಣ ಪೂರ್ಣಾವಧಿಯ ಎಂಡಿ ನೀಡಿಲ್ಲ ಎಂದರು. ಹಾಗೆ ನಿನ್ನೆ ಕೇಂದ್ರ ಸಚಿವರ ಭೇಟಿ ಮಾಡಿ ಪೂರ್ಣಾವಧಿಯ ಎಂಡಿ ನೀಡವಂತೆ ಮನವಿ ಮಾಡಿದ್ದೇನೆ
ನೇರಳೆ ಮಾರ್ಗದಲ್ಲಿ ಫೀಕ್ ಹಾವರ್ ನಲ್ಲಿ ನಿಲ್ಲಲ್ಲು ಸರಿಯಾದ ಜಾಗವಿಲ್ಲ ಮೆಟ್ರೋ ಹೊಣೆ ಹೊತ್ತಿರುವ ಎಂಡಿಗೆ ಎರಡ್ಮೂರು ಹೆಚ್ಚುವರಿ ಹುದ್ದೆ ನೀಡಲಾಗಿದೆ ಒಂದು ವರ್ಷದಿಂದ ಸರಿಯಾದ ನಾಯಕನಿಲ್ಲದೆ ನಮ್ಮ ಮೆಟ್ರೋ ಅನಾಥವಾಗಿದೆ ಬಿಎಂಆರ್ ಸಿಎಲ್ ಗೆ ತನ್ನದೇ ಆದ ಒಂದು ಸರಿಯಾದ ಕಟ್ಟಡ ಕೂಡ ಇಲ್ಲ ಬಿಎಂಆರ್ ಸಿಎಲ್ ನಲ್ಲಿ ಒಬ್ಬ ಎಂಡಿ ನಿವೃತ್ತಿಯಾದ ನಂತರ ಮತ್ತೊಂದು ಎಂಡಿ ನೇಮಕ್ಕೆ ಪ್ಲಾನ್ ಇಲ್ಲ
ಮೆಟ್ರೋದಲ್ಲಿ ಕೆಲಸ ಮಾಡುವ ಶೇಕಡಾ 90 ಪರ್ಸೆಂಟ್ ಉದ್ಯೋಗಿಗಳು ಗುತ್ತಿಗೆ ನೌಕರರು ಸರ್ಕಾರ ಇಷ್ಟೊಂದು ನಿರ್ಲಕ್ಷ್ಯ ಮಾಡ್ತಾ ಇದೆ ಅಂತ ತೇಜಸ್ವಿ ಸೂರ್ಯ ಪ್ರಶ್ನೆ ಮೆಟ್ರೋದಲ್ಲಿ ಬೇರೆ ಕಡೆ ನಿವೃತ್ತಿಯಾದವರೇ ಹೆಚ್ಚು ಸಿಬ್ಬಂದಿಯಿದ್ದಾರೆ ಶೇಕಡಾ 70 ನೌಕರರು ನಿವೃತ್ತಿ ಆಗಿ ಬಂದು ಸೇರಿದವರೇ ಇದ್ದಾರೆನಮ್ಮ ಮೆಟ್ರೋದಲ್ಲಿ ಒಂದೂವರೆ ವರ್ಷದಿಂದ ಹೆಚ್ ಆರ್ ಹುದ್ದೆ ಖಾಲಿಯಿದೆ ಈ ರೀತಿಯ ಕಾರಣದಿಂದ ಮೆಟ್ರೋ ಪ್ರಾಜೆಕ್ಟ್ ಡಿಲೆ ಆಗ್ತಾ ಇದ್ದಾವೆ
ಬೆಂಗಳೂರಿನ ಯಲ್ಲೋ ಲೇನ್ ಕಾಮಗಾರಿ ಫೆಬ್ರವರಿ ಶುರುವಾಗಬೇಕಿತ್ತು ಚೈನಾದಿಂದ ಮೀಸಾ ಬೇಕು ಅಂತ ಹೇಳಿದ್ರು ನಾನು ಕೇಂದ್ರ ಸಚಿವರ ಜೊತೆ ಮಾಡಿ ಕೊಡಿಸಿದ್ದೆ ಈಗ ಯಾವಾಗ ಯಲ್ಲೋ ಲೇನ್ ಒಪನ್ ಆಗುತ್ತೆ ಅಂತ ಕೇಳಿದ್ರೆ ಮುಂದಿನ ತಿಂಗಳು ಟೆಸ್ಟಿಂಗ್ ಅಂತಾರೆ ಸರ್ಕಾರದ ಅಧಿಕಾರಕ್ಕೆ ಬಂದು ಏಳು ತಿಂಗಳು ಆದರೂ ಒಂದೇ ಒಂದು ಮೆಟ್ರೋ ರಿವ್ಯೂ ಮೀಟಿಂಗ್ ಮಾಡಿಲ್ಲ ಈಗ ನಾವು ತುಮಕೂರಿಗೆ ತಗೊಂಡು ಹೋಗ್ತಿವಿ, ರಾಮನಗರಕ್ಕೆ ತೆಗೆದುಕೊಂಡು ಹೋಗ್ತೀವಿ
ಮೈಸೂರಿಗೆ ತೆಗೆದುಕೊಂಡು ಹೋಗ್ತೀವಿ ಎಂತ ಹೇಳ್ತಾ ಇದ್ದಾರೆ ಮೊದಲು ಸರಿಯಾಗಿ ಬೆಂಗಳೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಿ ಕೊಡಿ
ನಮ್ಮ ಮೆಟ್ರೋ ವೃದ್ಧಶ್ರಮಾದ ರೀತಿ ಆಗಿ ಬಿಟ್ಟಿದೆ, ಎಲ್ಲಾ ನಿವೃತ್ತಿಯಾದವರೇ ಇದ್ದಾರೆ ಈಗಾಗಲೇ ಎರಡು ಸಲ ಸಿಎಂಗೆ ಪತ್ರ ಬರೆದಿದ್ದೇನೆ, ಮಾಧ್ಯಮದ ಮೂಲಕ ಮೂರು ಬರೀ ಕೇಳಿದ್ದೇನೆ ಎಂದು ಹೇಳಿದರು.