ನ್ಯೂ ಇಯರ್ ಆರಂಭದಲ್ಲಿ ದುನಿಯಾ ವಿಜಯ್ (Duniya Vijay) ಮಾಸ್ ಅಭಿಮಾನಿಗಳಿಗೆ ಹಾಡೊಂದನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ. ‘ಭೀಮ’ ಸಿನಿಮಾದ ‘ನೂರು ರೂಪಾಯಿ ಮಿಕ್ಸ್’ (Nooru Rupai Mix) ಎಂಬ ಸುಕ್ಕಾ ಸಾಂಗ್ ರಿಲೀಸ್ ಆಗಿದೆ. ಈ ಹಾಡಿನ ವಿಶೇಷತೆ ಏನು? ಇಲ್ಲಿದೆ ಮಾಹಿತಿ.
‘ಸಲಗ’ (Salaga) ಸಕ್ಸಸ್ ನಂತರ ದುನಿಯಾ ವಿಜಯ್ ಫುಲ್ ಜೋಶ್ನಲ್ಲಿದ್ದಾರೆ. ಜನಸಾಮಾನ್ಯರ ನಡುವಿನ ಕತೆ ಕಂಟೆಂಟ್ ಇಟ್ಟುಕೊಂಡು, ಮನರಂಜನೆ ಜೊತೆ ನಿಮ್ಮ ಮಡಿಲಿಗೆ ಅರ್ಪಿಸಲು ಸಜ್ಜಾಗಿದ್ದಾರೆ. ಈಗಾಗೇ ರಿಲೀಸ್ ಆಗಿರುವ ಹಾಡುಗಳು ಮತ್ತು `ಭೀಮ’ ಕಂಟೆಂಟ್ ಅದ್ಭುತ ಸೌಂಡ್ ಮಾಡ್ತಿದೆ.
ಮೊನ್ನೆ ಮೊನ್ನೆ ಬೆಂಗಳೂರು ಲಾಲ್ಬಾಗ್ ಸಿದ್ದಾಪುರದ ಸಂದಿ-ಗೊಂದಿಗಳಲ್ಲಿ ‘ಭೀಮ’ನ ಫೈನಲ್ ಹಂತದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈಗ ಹೊಸ ವರ್ಷಕ್ಕೆ ನೂರು ರೂಪಾಯಿ ಮಿಕ್ಸ್ ಹಾಡನ್ನು ಬಜಾರ್ಗೆ ಬಿಟ್ಟಿದ್ದಾರೆ. ಈ ಹಾಡಿಗೆ ಫಿದಾ ಆಗಿದ್ದಾರೆ.
`ನೂರು ರೂಪಾಯಿ ಮಿಕ್ಸ್’ ಈ ಹಾಡನ್ನು ಕಲಾಸಿಪಾಳ್ಯದ ಲೋಕೇಶನ್ನಲ್ಲಿ ಶೂಟಿಂಗ್ ಮಾಡಲಾಗಿದೆ. ಎಂ.ಸಿ.ಬಿಜ್ಜು ಸಾಹಿತ್ಯ ಬರೆದಿದ್ದು, ಚರಣ್ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನೂರು ರೂಪಾಯಿ ಹಾಡು ಭರ್ಜರಿ ಸದ್ದು ಮಾಡ್ತಿದೆ. ನಿರ್ಮಾಪಕ ಜಗದೀಶ್ ಮತ್ತು ಕೃಷ್ಣ ಸಾರ್ಥಕ್ ‘ಭೀಮ’ನಿಗೆ ಸಿಗ್ತಿರುವ ರೆಸ್ಪಾನ್ಸ್ ನೋಡಿ ಖುಷಿಯಾಗಿದ್ದಾರೆ. ‘ಭೀಮ’ ಈ ಚಿತ್ರವನ್ನು ಅದ್ದೂರಿಯಾಗಿ ತೆರೆಯ ಮೇಲೆ ತೋರಿಸಲು ಕೋಟಿ ಕೋಟಿ ಸುರಿದಿದ್ದಾರೆ
ಸಲಗ ಸಿನಿಮಾದಲ್ಲಿ ನಟನೆ ಜೊತೆ ನಿರ್ದೇಶನ ಮಾಡಿ ಗೆದ್ದು ತೋರಿಸಿದ್ದರು. ಭೀಮ ಸಿನಿಮಾಗೂ ದುನಿಯಾ ವಿಜಯ್ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಡಬಲ್ ಆಗಿದೆ. ಈಗಾಗಲೇ ಹಾಡುಗಳು ಸದ್ದು ಮಾಡ್ತಿರೋ ಹಾಗೆಯೇ ಸಿನಿಮಾ ಕೂಡ ಚಿತ್ರಮಂದಿರದಲ್ಲಿ ಸೌಂಡ್ ಮಾಡುತ್ತಾ ಕಾದುನೋಡಬೇಕಿದೆ.