ಬಾಗಲಕೋಟೆ: ನವೀನ ಚಟುವಟಿಕೆಗಳ ಮೂಲಕ ಬೋಧನೆ ಮಾಡಿ ಮಕ್ಕಳ ಕಲಿಕೆ ಸುಗಮ ಮಾಡಬೇಕು. ಜ್ಞಾನದ ಜೊತೆಗೆ ಆತ್ಮವಿಶ್ವಾಸ ಬೆಳೆಸಬೇಕು. ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿ ಹತ್ತಿರವಾದಾಗ ಮಕ್ಕಳು ಆಪ್ತರಾಗಿ ಪರಿಣಾಮಕಾರಿಯಾಗಿ ಕಲಿಯುತ್ತಾರೆ ಎಂದು ತೇರದಾಳ ಪೊಲೀಸ್ ಠಾಣೆಯ ಪಿಎಸ್ಐ ಅಪ್ಪಣ್ಣ ಐಗಳಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ತೇರದಾಳ ನಗರದ ಖೋತ ಇಂಗ್ಲೀಷ ಟುಟೋರಿಯಲ ಸಂಸ್ಥೆಯಲ್ಲಿ ಎನ್ ಎಮ್ ಎಮ್ ಎಸ್ ವಿದ್ಯಾರ್ಥಿಗಳ ಪೂರ್ವ ತಯಾರಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಿತು.
ಇದೇ ಸಂದರ್ಭದಲ್ಲಿ ಡಾ. ಎಮ್ ಆರ್ ಪಾಟೀಲ. ಬಿ ಎಡ್ ಕಾಲೇಜಿನ ಪ್ರಾಚಾರ್ಯರು. ಸಂಸ್ಥೆಯ ಅಧ್ಯಕ್ಷರಾದ ಮುರಲಿಧರ ಸೋಪಾನ ಖೋತ, ವ್ಯವಸ್ಥಾಪಕರಾದ ನಾಮದೇವ ಸೋಪಾನ ಖೋತ. ಕಿರಣ ಹುಲ್ಲೊಳ್ಳಿ. ಮಲ್ಲಿಕಾರ್ಜುನ ಚಿಂಚನ್ನವರ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ