ಬೆಂಗಳೂರು: ಕರ್ನಾಟಕದಲ್ಲಿ (Karnataka) ತುಘಲಕ್ ಸರ್ಕಾರ ನಡೆಯುತ್ತಿದೆ. ಅದಕ್ಕಾಗಿ ಸರ್ಕಾರ ಕರ ಸೇವಕರ ಬಂಧನ ಮಾಡುತ್ತಿದೆ ಎಂದು ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ದ ಮಾಜಿ ಸಚಿವ ರೇಣುಕಾಚಾರ್ಯ (MP Renukacharya) ಕಿಡಿಕಾರಿದ್ದಾರೆ.
K – SET Exam: ಜನವರಿ 13ರಂದು ಕೆ-ಸೆಟ್ ಪರೀಕ್ಷೆ: ಪ್ರವೇಶಪತ್ರ ಪಡೆದುಕೊಳ್ಳಲು ಡೌನ್ಲೋಡ್ಗೆ ಸೂಚನೆ
ಕರ ಸೇವಕರ ಬಂಧನ ವಿಚಾರಕ್ಕೆ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡುತ್ತಿಲ್ಲ. ಇದು ತುಘಲಕ್ ದರ್ಬಾರ್ ಸರ್ಕಾರ. ಸದ್ದಾಂ ಹುಸೇನ್ ತರಹ ಆಡಳಿತ ಮಾಡುತ್ತಿದ್ದಾರೆ. 31 ವರ್ಷದ ಕೇಸ್ ಈಗ ರೀ ಓಪನ್ ಮಾಡುತ್ತಾರೆ. ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇಡೀ ದೇಶದ ಜನ ಖುಷಿ ಪಡುತ್ತಿದ್ದಾರೆ. ಈ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ಕರ ಸೇವಕರ ಬಂಧನ ಮಾಡಿದ್ದಾರೆ. ಅವರೇನು ಕೊಲೆ ಮಾಡಿದ್ರಾ, ಲೂಟಿ ಮಾಡಿದ್ರಾ? ದೌರ್ಜನ್ಯ ಮಾಡಿದ್ರಾ? ಈ ಕಾಂಗ್ರೆಸ್ ಸರ್ಕಾರ ಸೇಡಿನ ಸರ್ಕಾರ. ರಾಜ್ಯದ ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದ್ದಾರೆ ಎಂದು ಆಂಜನೇಯ ಹೇಳುತ್ತಾರೆ. ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಆಂಜನೇಯ ಹೀಗೆ ಮಾತನಾಡುತ್ತಿದ್ದಾರೆ. ಆಂಜನೇಯ ನೀವು ಆಂಜನೇಯ ಅಲ್ಲ ರಾವಣಾಸುರ. ದೇಶದ ಸಂಸ್ಕೃತ ಕಲೆ ಉಳಿಯಬೇಕು ಎಂಬ ಸಾವಿರಾರು ವರ್ಷಗಳ ಕನಸು ರಾಮ ಮಂದಿರ. ಕಾಂಗ್ರೆಸ್ ಅವಧಿಯಲ್ಲಿ ಸಂಘರ್ಷಗಳು ಆಗಿದ್ದವು. ಎಷ್ಟು ಕರ ಸೇವಕರನ್ನು ಕಾಂಗ್ರೆಸ್ ಜೈಲಿಗೆ ಕಳಿಸಿತ್ತು. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇತ್ಯರ್ಥ ಆಗಿದೆ. ಭವ್ಯ ರಾಮ ಮಂದಿರ ನಿರ್ಮಾಣ ಆಗುತ್ತಿದೆ. ಇದು ಕಾಂಗ್ರೆಸ್ಗೆ ತಡೆಯಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.