ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಪಾರ್ಟಿ ಟಿಕೆಟ್ ಕೊಡಿಸುವುದಾಗಿ ಮಹಿಳೆಗೆ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಪ್ರತಿಷ್ಠಿತ ಸ್ಟಾರ್ ಹೋಟೆಲ್ JW ಮ್ಯಾರಿಯೇಟ್ ಹೆಸರಲ್ಲಿ ಮಹಿಳೆಗೆ ವಂಚನೆ ಮಾಡಲಾಗಿದೆ.
K – SET Exam: ಜನವರಿ 13ರಂದು ಕೆ-ಸೆಟ್ ಪರೀಕ್ಷೆ: ಪ್ರವೇಶಪತ್ರ ಪಡೆದುಕೊಳ್ಳಲು ಡೌನ್ಲೋಡ್ಗೆ ಸೂಚನೆ
ಪಾರ್ಟಿ ಟಿಕೆಟ್ಗಾಗಿ ಸಂಪರ್ಕ ಮಾಡಿದ್ದ ಹೇಮ ಮಾಲಿನಿ ಎಂಬ ಮಹಿಳೆ ಸುರೇಂದರ್ ಕುಮಾರ್ ಎಂಬಾತನ ಸಂಪರ್ಕ ಮಾಡಲಾಗಿದೆ. ಟಿಕೆಟ್ ಬೇಕು ಎಂದಾಗ ಒಂದು ಟಿಕೆಟ್ಗೆ ಬರೋಬ್ಬರಿ 19500 ಹಣ ಪಡೆದಿದ್ದಾನೆ. ಗೂಗಲ್ ಪೇ ಮೂಲಕ ಹಣ ನೀಡಲಾಗಿತ್ತು..
ನಂತರ ಅಂಬಿಕಾ ಅನ್ನೋ ಮ್ಯಾನೇಜರ್ ಹೆಸರು ಹೇಳಿ ಟಿಕೆಟ್ ಪಡೆಯಲು ಸೂಚನೆ ನೀಡಲಾಗಿತ್ತು ಆದರೆ ಹೋಟೆಲ್ ಬಳಿ ಹೋದಾಗ ಅಂಬಿಕಾ ಎಂಬ ಸಿಬ್ಬಂದಿ ಇಲ್ಲಾ ಎನ್ನುವುದು ಗೊತ್ತಾಗಿದೆ ಆ ನಂತರ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ವಂಚಕರನ್ನು ಬಂಧಿಸುವಂತೆ ಮನವಿ ಮಾಡಲಾಗಿದೆ.