ಬೆಂಗಳೂರು: ರಾಜ್ಯ ಸರ್ಕಾರ ಪದವಿ ಮಕ್ಕಳಿಗೆ ಶುಲ್ಕ ಹೆಚ್ಚಳದ ಬರೆ ಎಳೆದಿದೆ, ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ.10ರಷ್ಟು ಏರಿಕೆಗೆ ಮಾಡಿ ಆದೇಶ ಮಾಡಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಕೋರ್ಸ್ ಗಳ ಶುಲ್ಕ 10 % ಏರಿಕೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿದೆ. ಈ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮತ್ತಷ್ಟು ಹೊರೆಯಾಗಲಿದೆ. ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಅನೇಕ ಪದವಿ ಕೋರ್ಸ್ಗಳ ಶುಲ್ಕ ಹೆಚ್ಚಳ ಮಾಡಲು ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ, ಈಗಾಗಲೇ ಈ ಪರಿಷ್ಕೃತ ಶುಲ್ಕ ಪಟ್ಟಿಯನ್ನ ಯೂನಿವರ್ಸಿಟಿಗಳಿಗೆ ನೀಡಿ ಸರ್ಕಾರ ಸೂಚನೆ ನೀಡಿದೆ.
K – SET Exam: ಜನವರಿ 13ರಂದು ಕೆ-ಸೆಟ್ ಪರೀಕ್ಷೆ: ಪ್ರವೇಶಪತ್ರ ಪಡೆದುಕೊಳ್ಳಲು ಡೌನ್ಲೋಡ್ಗೆ ಸೂಚನೆ
ಇನ್ನೂ ಶುಲ್ಕ ಹೆಚ್ಚಳದಿಂದ ಪದವಿಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದು, ಸರ್ಕಾರ ವಿದ್ಯಾರ್ಥಿಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ, ಸರ್ಕಾರ ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನ ಅನುಷ್ಠಾನಕ್ಕೆ ತಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತೆ ಕಾಣುತ್ತಿದೆ, ವಿಶ್ವವಿದ್ಯಾಲಯಗಳಲ್ಲಿ ಆದಾಯ ಕೊರತೆ ಉಂಟಾಗಿದ್ದು ಅದರ ಹೊಣೆಯನ್ನು ವಿದ್ಯಾರ್ಥಿಗಳ ಮೇಲೆ ಹಾಕೋದು ಎಷ್ಟು ಸರಿ ಅನ್ನೋದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.