ಚಾಮರಾಜನಗರ: ರಾಮನನ್ನು ಬಿಜೆಪಿಯವರು (BJP) ದೊಡ್ಡ ಅಸ್ತ್ರ ಮಾಡಿಕೊಂಡು ಜನರ ಭಾವನೆ ಕೆರಳಿಸುತ್ತಿದ್ದಾರೆ ಎಂದು ರೇಷ್ಮೆ ಹಾಗೂ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ (K. Venkatesh) ಆರೋಪಿಸಿದರು. ಚಾಮರಾಜನಗರ (Chamarajanagar) ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಅವರು, ರಾಮನ ಮೇಲೆ ನಮ್ಮ ಅಭ್ಯಂತರವಿಲ್ಲ.
ನಮ್ಮ ಅಭ್ಯಂತರ ಇರೋದು ಬಿಜೆಪಿ ನಡವಳಿಕೆ ಮೇಲೆ. ರಾಮಮಂದಿರ ನಿರ್ಮಾಣದ ಬಗ್ಗೆ ನಮ್ಮ ತಕರಾರಿಲ್ಲ, ಆದರೆ ರಾಮ ನಮ್ಮವನೇ ಅಂತಾ ಬಿಜೆಪಿಯವರು ಹೇಳುವ ವಿಚಾರದಲ್ಲಿ ನಮ್ಮ ತಕರಾರಿದೆ, ಆಕ್ರೋಶ ಇದೆ ಎಂದರು. ಎಲ್ಲರಿಗೂ ಬೇಕಾದವನು ರಾಮ, ಹನುಮಂತ, ಸೀತೆಯನ್ನು ಎಲ್ಲರೂ ಪೂಜೆ ಮಾಡ್ತಾರೆ.
ನ್ಯೂ ಇಯರ್ ದಿನ ದಾಖಲೆ ಬರೆದ ಓಯೋ ರೂಮ್ ಬುಕ್ಕಿಂಗ್ – ಒಟ್ಟು ಮಾರಾಟವಾದ ಕಾಂಡೋಮ್ ಎಷ್ಟು ಗೊತ್ತಾ!?
ಅದರೆ ಬಿಜೆಪಿಯವರು ರಾಮ ತಮಗೆ ಸೇರಿದವನೆಂದು ಪ್ರತಿಬಿಂಬಿಸುತ್ತಿದ್ದಾರೆ. ಇದು ಸರಿಯಾದ ವರ್ತನೆಯಲ್ಲ. ಆ ದೃಷ್ಟಿಯಿಂದ ಸಿದ್ದರಾಮಯ್ಯ ನಮ್ಮ ನಾಯಕರು. ಆದ್ದರಿಂದ ರಾಮ ನಮ್ಮಲ್ಲಿ ಇದ್ದಾರೆಂದು ಮಾಜಿ ಸಚಿವ ಆಂಜನೇಯ ಹೇಳಿದ್ದಾರಷ್ಟೇ. ರಾಮನನ್ನು ತುಚ್ಛೀಕರಿಸುವ ರೀತಿ ಅವರು ಹೇಳಿಲ್ಲ ಎಂದು ಅವರು ಮಾಜಿ ಸಚಿವ ಆಂಜನೇಯ ಹೇಳಿಕೆ ಸಮರ್ಥಿಸಿಕೊಂಡರು.