ಚಾಮರಾಜನಗರ:- ಪವಾಡ ಪುರುಷ ಮಲೈಮಹದೇಶ್ಚರ ಇದೀಗ ಭಕ್ತರಿಂದ ಕೋಟಿ ಕೋಟಿ ಕಾಣಿಕೆ ಹರಿದು ಬಂದಿದೆ. 2 ಕೋಟಿ 90 ಲಕ್ಷ ಭಕ್ತರಿಂದ ಕಾಣಿಕೆ ಬಂದಿದ್ದು, 1 ಕೆಜಿ 2 ಗ್ರಾಂ ಚಿನ್ನ, ಬೆಳ್ಳಿ 3 ಕೆಜಿ 355 ಕಾಣಿಕೆ ನೀಡಲಾಗಿದೆ.
ಭಕ್ತರಿಂದ ಈ ಬಾರಿ 3 ಕೋಟಿ ಸಮೀಪಕ್ಕೆ ಮಾದಪ್ಪ ಬಂದಿದ್ದು, ಒಟ್ಟು 2.ಕೋಟಿ 90 ಲಕ್ಷ
ರೂಪದಲ್ಲಿ ಭಕ್ತರಿಂದ ಕಾಣಿಕೆ ಬಂದಿದೆ. 33 ದಿನಗಳಲ್ಲಿಯೇ ಪವಾಡ ಪುರುಷ ಮಾದಪ್ಪ ಕೋಟ್ಯಾಧಿಪತಿಯಾಗಿದ್ದಾನೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಮಲೈಮಹದೇಶ್ವರ ದೇವಾಲಯದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ನಾನಾ ಭಾಗದಿಂದ ಭಕ್ತರಿಂದ ಭಾರೀ ಕಾಣಿಕೆ ಹರಿದು ಬಂದಿದೆ.