ಕಾಗವಾಡ: ವಿಧಾನ ಸಭಾ ವ್ಯಾಪ್ತಿಯ ಚಂದ್ರಪ್ಪವಾಡಿ ಗ್ರಾಮದಲ್ಲಿ 55 ರೈತರು ಹಸಿರು ಶಾಲ ಧರಿಸುವ ಮೂಲಕ ರೈತ ಸಂಘಕ್ಕೆ ಬಲವರ್ಧನೆ ಮಾಡಲಾಗಿದೆ.
ಗಡಿ ಭಾಗದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ರೈತರಿಗೆ ನ್ಯಾಯಸಮ್ಮತ ನಿರ್ಧಾರಕ್ಕೆ ಸರ್ಕಾರ ಹಿಂದೆಟು ಹಾಕುತ್ತಿವೆ. ಗಡಿ ಭಾಗದಲ್ಲಿ ಒದಗಿಸಬೇಕಾದ ಬಸವೇಶ್ವರ ಎತ ನೀರಾವರಿ ಯೋಜನೆ ವಿಳಂಬ ಹಾಗೂ ಭ್ರಷ್ಟಾಚಾರ ಕುರಿತ ಸಮಗ್ರ ವರದಿ ಸಂಗ್ರಹಣೆಗೆ ಮುಂದಾದ ರೈತ ಸಂಘ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಗಡಿ ಭಾಗದ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳಿಗೆ ಸೂಕ್ತ ಉತ್ತರ ನೀಡುವ ಎಚ್ಚರಿಕೆ ನೀಡಿದ್ದಾರೆ ಏಳು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿರುವ ಬಸವೇಶ್ವರ ಎತ ನೀರಾವರಿ ಯೋಜನೆಯ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸದೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪವನ್ನ ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಮಾಡಿದ್ದೂ ಮುಂದಿನ ದಿನಗಳಲ್ಲಿ ಸತ್ಯ- ಸತ್ತೇತೆಯ ಬಗ್ಗೆ ತಿಳಿಯಲು ಕಾನೂನಾತ್ಮಕ ಹೋರಾಟಕ್ಕೆ ಬದ್ದರಿದ್ದೇವೆ ಎಂದು ರೈತ ಮುಖಂಡರು ಹೇಳಿದರು.