ಹುಬ್ಬಳ್ಳಿ:- ಇಲ್ಲಿನ ಎಪಿಎಂಸಿಯಲ್ಲಿ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಅವರು ಅಧಿಕಾರಿಗಳು ಹಾಗೂ ವರ್ತಕರೊಂದಿಗೆ ಈಚೆಗೆ ಸಭೆ ನಡೆಸಿದರು.
ನಗರದ ಎಪಿಎಂಸಿ ಆವರಣದಲ್ಲಿ ಮೂಲಸೌಕರ್ಯ ಸುಧಾರಣೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು.
ಎಪಿಎಂಸಿಗೆ ಈಚೆಗೆ ಭೇಟಿ ನೀಡಿದ ಅವರಿಗೆ ಅಧಿಕಾರಿಗಳು ಹಾಗೂ ವರ್ತಕರೊಂದಿಗೆ ಸಭೆ ನಡೆಸಿದರು.
ಒಳಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಸುಲಭ ಶೌಚಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಹಾರ ಗೃಹ, ಬೀದಿದೀಪಗಳ ವ್ಯವಸ್ಥೆ, ವಾಹನಗಳ ಸುಗಮ ಸಂಚಾರ, ವರ್ತುಲ ರಸ್ತೆ ನಿರ್ಮಾಣ, ವರ್ತಕರ ಆಸ್ತಿ ತೆರಿಗೆ ವಿನಾಯ್ತಿ, ಇಂದಿರಾ ಕ್ಯಾಂಟೀನ್ ನಿರ್ಮಾಣ, ಕರ್ನಾಟಕ ಒನ್ ಕೇಂದ್ರ, ಪಾಲಿಕೆ ಉಪಕಚೇರಿ ತೆರೆಯುವಂತೆ ವರ್ತಕರು ಮನವಿ ಸಲ್ಲಿಸಿದರು.
ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಬಿ.ಆರ್.ಟಿ.ಎಸ್. ವ್ಯವಸ್ಥಾಪಕ ಶಿವಾನಂದ ಭಜಂತ್ರಿ, ಎ.ಸಿ.ಪಿ. ರಾಜು, ರಾಜಕಿರಣ ಬಿ. ಮೆಣಸಿನಕಾಯಿ, ಎ.ಪಿ.ಎಂ.ಸಿ. ಕಾರ್ಯದರ್ಶಿ ಕೆ.ಬಿ. ಮೇರುನಂದನ, ಅನೀಲ ಓಸ್ತವಾಲ, ಅಶೋಕ ಎಸ್. ಬಾಳಿಕಾಯಿ, ರವಿ ಮರದ, ಗಂಗನಗೌಡ ಪಾಟೀಲ, ಗುಂಡಪ್ಪ ಸಾವುಕಾರ, ಚಂದ್ರಶೇಖರ ಪೂಜಾರ, ಶಿವಯೋಗಿ ಹೊಸಕಟ್ಟಿ, ಈಶ್ವರಪ್ಪ ಹೆಬಸೂರ, ವಿನೋದ ತಲ್ಲೂರ ಉಪಸ್ಥಿತರಿದ್ದರು.