ಚಾಮರಾಜನಗರ:-ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಪ್ರಸಿದ್ದ ದೇವಾಲಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರತಿನಿತ್ಯ ಒಂಟಿ ಸಲಗ ದೇವರ ದರ್ಶನ ಪಡೆಯುತ್ತಿದೆ.
ಕರ್ನಾಟಕದ ಊಟಿ ಎಂದೇ ಖ್ಯಾತಿ ಪಡೆದಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ 4 ವರ್ಷದಿಂದ ಒಂಟಿ ಸಲಗ ಪ್ರತಿನಿತ್ಯ ಕಾಣಿಸಿಕೊಂಡಿದೆ. ಭಾರಿ ಗಾತ್ರದ ಕೊಂಬನ್ನು ಒಂದಿರುವ ಕಾಡಾನೆ ಇದೀಗ ಗೋಪಾಲಸ್ಚಾಮಿ ಭಕ್ತ ಎಂದೇ ಖ್ಯಾತಿ ಪಡೆದಿದೆ. ಸಂಜೆ 4 ಗಂಟೆಯಾದರೆ ಸಾಕು ದೇವಲಯಕ್ಕೆ ಆಗಮಿಸಿ ದೇವಾಲಯದ ಸುತ್ತ ಸಂಜೆ ಹಾಗೂ ಮುಂಜಾನೆ ಪ್ರದಕ್ಷಿಣೆ ಹಾಕುತ್ತದೆ.
ಒಂಟಿ ಸಲಗ ನೋಡಲು ಭಕ್ತರು ಓಡೋಡಿ ಬಂದಿದ್ದಾರೆ. ಸೆಲ್ಪಿ ಕ್ಲಿಕ್ಕಿಸಿ ಒಂಟಿ ಸಲಗದೊಂದಿಗೆ ಪ್ರವಾಸಿಗರು ಫೋಸ್ ನೀಡಿದ್ದಾರೆ. ಸುರಕ್ಷತೆ ಮುಖ್ಯ ಎಂಬುದು ಭಕ್ತರು ಆಗ್ರಹಿಸಿದ್ದಾರೆ.