ಪೀಣ್ಯ ದಾಸರಹಳ್ಳಿ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸಾಧನ ಕ್ರೀಡೆಯಾಗಿದೆ. ಒಳ್ಳೆಯ ಆಟದ ಮೈದಾನ ಮತ್ತು ಕ್ರೀಡಾ ಉಪಕರಣಗಳ ಸೌಲಭ್ಯ ಪಡೆದು ಕ್ರೀಡೆಯಲ್ಲಿ ಮುಂದೆ ಬರಬೇಕು ಎಂದು ಶಿಕ್ಷಣ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಪ್ರಕಾಶ್ ಬಿ.ಕೆ.ತಿಳಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ಮಾರ್ಕೆಟ್ ಹತ್ತಿರ ಇರುವ ಬಿ.ಎನ್. ಅರ್. ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾದ ಪ್ರಕಾಶ್ ಬಿ.ಕೆ. ಮಾತನಾಡಿ ಕ್ರೀಡಾ ಚಟುವಟಿಕೆಗಳಿಂದ ನಮ್ಮ ಆರೋಗ್ಯ ಸದೃಢಗೊಳ್ಳುತ್ತದೆ ಎಂದು ಕ್ರೀಡೆಯಲ್ಲಿ ಸೋಲು, ಗೆಲುವು ಸ್ವಾಭಾವಿಕವಾಗಿದ್ದು, ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನಮ್ಮ ದೇಹವೂ ಸದೃಢ ಮತ್ತು ಆರೋಗ್ಯವಾಗಿ ಇರುತ್ತದೆ.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಸೋಲು-ಗೆಲುವಿನ ಅರ್ಥವನ್ನು ತಿಳಿದುಕೊಳ್ಳಬೇಕು, ಈ ಮೂಲಕ ಜೀವನದಲ್ಲಿ ಸಮಚಿತ್ತವನ್ನು ಸಾಧಿಸಿಕೊಳ್ಳಬಹುದು, ಉತ್ತಮ ಕ್ರೀಡಾಪಟು ಉತ್ತಮ ವಿದ್ಯಾರ್ಥಿಯಾಗುತ್ತಾನೆ. ಉತ್ತಮ ವಿದ್ಯಾರ್ಥಿ ಉತ್ತಮ ನಾಗರಿಕನಾಗಿ ಜೀವನದಲ್ಲಿ ಯಶಸ್ಸು ಪಡೆಯುತ್ತಾನೆ ಎಂದರು.
ನಿವೃತ್ತ ಯೋಧ ಮುರುಳಿ ಟಿ.ವಿ ಮಾತನಾಡಿ ಆಟಗಳು ಮತ್ತು ಕ್ರೀಡೆಗಳು ಒಬ್ಬರ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹದಲ್ಲಿ ಬದಲಾವಣೆ ತರುತ್ತದೆ. ಉತ್ತಮ ಗುಣಮಟ್ಟದ ತರಬೇತಿಯನ್ನು ಮಕ್ಕಳಿಗೆ ನೀಡಿದರೆ ಅವರು ಎಲ್ಲಾ ರೀತಿಯ ಸಾಧನೆಯನ್ನು ಮಾಡಲು ಸಹಕಾರಿಯಾಗುತ್ತದೆ . ವಿದ್ಯಾರ್ಥಿಗಳ ವೈವಿಧ್ಯಮಯ ಮತ್ತು ಬದಲಾಗುತ್ತಿರುವ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುವ ಸಲುವಾಗಿ ಶಾಲೆಗಲು ಎಲ್ಲಾ ಇತ್ತೀಚಿನ ಸಲಕರಣೆಗಳ ಸೌಲಭ್ಯಗಳೊಂದಿಗೆ ಕೂಡಿರುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರು ವಿಜಯ್ ಕುಮಾರ್ ವಿ. ಮಾತನಾಡಿ ನಮ್ಮ ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಓದಿನ ಜೊತೆಗೆ ಕ್ರೀಡೆಯಲ್ಲಿ ಕೂಡ ಹೆಚ್ಚು ಪ್ರೋತ್ಸಾಹವನ್ನು ಕೊಡುತ್ತೆವೆ ಪಾಠದ ಜೊತೆಗೆ ಅಟವೂ ಕೂಡ ಮುಖ್ಯ ಎಂದು ತಿಳಿಸಿದರು.ದೈಹಿಕ ಬೆಳವಣಿಗೆಯ ಜೊತೆಗೆ ಬೌದ್ಧಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು. ಕ್ರೀಡೆಯ ಜೊತೆಗೆ ಶಿಕ್ಷಣಕ್ಕೂ ಆದ್ಯತೆ ಕೊಡಬೇಕು. ಉತ್ತಮ ವಾತಾವರಣ, ಶಿಕ್ಷಕರ ಸಹಾಯದಿಂದ ಗುಣಮಟ್ಟದ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಕಛೇರಿಯ ವಿಷಯ ಪರೀವೀಕ್ಷಕ ಅಧಿಕಾರಿಗಳಾದ ವೆಂಕಟೇಶ್ ಬಾಬು,ರಾಮಲಿಂಗೇಗೌಡ, ಮಂಜುನಾಥ್, ಅಜಯ್ ,ಶಾಲೆಯ ಪ್ರಾಶುಂಪಾಲರು ಭೂಷಣ್ ಎನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.